ಐಪೂರ್: ಪಾಕಿಸ್ತಾನದ ಐಎಸ್ಐ ಮಹಿಳಾ ಏಜೆಂಟ್ಗೆ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಭಾರತೀಯ ಸೈನಿಕರನ್ನು ಜೋಧ್ಪುರ್ ರೈಲ್ವೆ ನಿಲ್ದಾಣದ ಬಳಿ ಗುಪ್ತಚರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಬ್ಬರೂ ಮಂಗಳವಾರ ಪೊಖ್ರಾನ್ನಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಅವರನ್ನು ಜಖ್ಪುರ ರೈಲ್ವೆ ನಿಲ್ದಾಣದಲ್ಲಿ ಗುಪ್ತಚರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನಿ ಮಹಿಳೆಯ ಹನಿಟ್ರ್ಯಾಪ್ ಬಲೆಗೆ ಸಿಲುಕಿದ ಈ ನಿರ್ಣಾಯಕರು ಆಕೆಗೆ ಹಲವು ಸೂಕ್ಷ್ಮ ಮಾಹಿತಿಗಳನ್ನು ನೀಡಿದ್ದಾರೆ ಎಂಬುದನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ವಿಚಾರಣೆಗಾಗಿ ಜೋಧಪುರದಿಂದ ಜೈಪುರಕ್ಕೆ ಕರೆದೊಯ್ಯಲಾಗಿದೆ.
ಪ್ರಾಥಮಿಕ ತನಿಖೆಯ ನಂತರ ಹೆಚ್ಚುವರಿ ಮಹಾನಿರ್ದೇಶಕ ಉಮೇಶ್ ಮಿಶ್ರಾ ಸೈನಿಕರನ್ನು ಹನಿಟ್ರ್ಯಾಫ್ ಮಾಡಿರುವುದಾಗಿ ಖಚಿತಪಡಿಸಿದ್ದಾರೆ. ಅಧಿಕಾರಿ ಮೂಲಗಳು ಹೇಳುವ ಪ್ರಕಾರ ವಾಟ್ಸ್ಆಯಪ್ ಮತ್ತು ಫೇಸ್ಬುಕ್ ಮೂಲಕ ಸೈನಿಕರಿಬ್ಬರೂ ಆ ಮಹಿಳೆಗೆ ಮಾಹಿತಿ ನೀಡುತ್ತಿದ್ದರು. ಸೈನಿಕರಲ್ಲಿ ಒಬ್ಬನು ಮಧ್ಯಪ್ರದೇಶದವನು ಮತ್ತೊಬ್ಬನು ಅಸ್ಸಾಂ ಮೂಲದವನು.
ಐಎಸ್ಐ ಮಹಿಳಾ ಏಜೆಂಟರ್ ಪಂಜಾಬಿ ಭಾಷೆಯನ್ನು ಬಲ್ಲವಳಾಗಿದ್ದಳು. ಇವಳು ಪಾಕಿಸ್ತಾನಿ ಸಂಖ್ಯೆಯಿಂದ ವಾಯ್ಸ್ ಓವರ್, ಇಂಟರ್ನೆಟ್ ಪ್ರೋಟೋಕಾಲ್ ಸೇವೆಯನ್ನು ಬಳಸಿ ಪೋನ್ ಮಾಡುತ್ತಿದ್ದಳು. ಅದು ಸೈನಿಕರ ಮೊಬೈಲ್ ಪರದೆಯಲ್ಲಿ ಭಾರತೀಯ ಪೋನ್ ಸಂಖ್ಯೆಯಂತೆಯೇ ಗೋಚರಿಸುತ್ತದೆ. ಹಾಗಾಗಿ ಅವಳನ್ನು ಭಾರತೀಯಳೆಂದು ನಂಬಿ ರಾಜಸ್ತಾನದಲ್ಲಿ ಸೈನ್ಯ ನಿಯೋಜನೆ, ಸೇನಾ ಉಪಕರಣಗಳ ಬಗ್ಗೆ ಆಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಪಿಗಳಾದ ಈ ಇಬ್ಬರೂ ಸೈನಿಕರನ್ನು ಲ್ಯಾನ್ಸ್ ನಾಯಕ್ ರವಿವರ್ಮಾ ಮತ್ತು ವಿಚಿತ್ರಾ ಬೊಹ್ರಾ ಎಂದು ಗುರುತಿಸಲಾಗಿದೆ,
Comments are closed.