ನವೆಂಬರ್ : ಇಂದು ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ಹಾಗಾಗಿ ಪ್ರತಿಯೊಬ್ಬರ ಮೊಬೈಲ್ ನಲ್ಲೂ ಮಕ್ಕಳ ದಿನಾ ಚರಣೆಗೆ ಶುಭ ಕೋರುವ ಮೆಸೇಜ್ ಗಳ ಸುರಿಮಳೆಯೇ ಆಗುತ್ತಿದೆ. ಪ್ರತಿಯೊಬ್ಬರೂ ಕೂಡ ವಾಟ್ಸ್ ಆಪ್ ನಲ್ಲಿ, ಫೇಸ್ ಬುಕ್ ನಲ್ಲಿ, ಇನ್ಸ್ಟಾಗ್ರಾಂನಲ್ಲಿ ಮಕ್ಕಳ ದಿನಾಚರಣೆಗೆ ಶುಭಕೋರುತ್ತಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೀವೂ ಕೂಡ ಮಕ್ಕಳಿಗೆ ವಿಶೇಷವಾಗಿ ಶುಭಕೋರಬೇಕು ಎಂದು ಬಯಸುತ್ತಿರಬಹುದು. ಅದಕ್ಕಾಗಿ ನಿಮ್ಮ ಮೊಬೈಲ್ ಯಾರೋ ಕಳುಹಿಸಿದ ಫಾರ್ವರ್ಡ್ ಮೆಸೇಜ್ ನ್ನೇ ಮತ್ತೊಬ್ಬರಿಗೆ ಫಾರ್ವರ್ಡ್ ಮಾಡುತ್ತಿರಬಹುದು. ಆದರೆ ಹಾಗೆ ಮಾಡುವ ಅಗತ್ಯವಿಲ್ಲ.
ಒಮ್ಮೆ ಪ್ಲೇ ಸ್ಟೋರ್ ಕಡೆ ಮುಖ ಮಾಡಿ ನೋಡಿ. ಯಾಕೆಂದರೆ ಮಕ್ಕಳ ದಿನಾಚರಣೆಗಾಗಿ ನೀವು ಗ್ರೀಟಿಂಗ್ ಕಳುಹಿಸುವುದಕ್ಕೆ, ವಿಶೇಷ ರೀತಿಯಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಎಡಿಟ್ ಮಾಡುವುದಕ್ಕೆ, ಮಕ್ಕಳಿಗೆ ಸಂಬಂಧಿಸಿದ ಮಕ್ಕಳ ದಿನಾಚರಣೆಯ ಮೆಸೇಜ್ ಗಳನ್ನು ಕಳುಹಿಸುವುದಕ್ಕಾಗಿ ಹಲವು ಆಪ್ ಗಳು ಲಭ್ಯವಿದೆ.
ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಚಿಲ್ಡ್ರನ್ಸ್ ಡೇ ಆಪ್ ಎಂದು ಸರ್ಚ್ ಬಾರ್ ನಲ್ಲಿ ಟೈಪ್ ಮಾಡಿ ನೋಡಿ. ಅದೆಷ್ಟೋ ಆಪ್ ಗಳು ನಿಮಗೆ ಲಭ್ಯವಾಗುತ್ತವೆ. ಹ್ಯಾಪಿ ಚಿಲ್ಡರ್ನ್ಸ್ ಡೇ ವಿಷಸ್, ಹ್ಯಾಪಿ ಚಿಲ್ಡ್ರನ್ಸ್ ಡೇ ಫೋಟೋ ಎಡಿಟರ್, ಚಿಲ್ಡ್ರನ್ಸ್ ಡೇ ವೀಡಿಯೋ ಮೇಕರ್ ವಿತ್ ಮ್ಯೂಸಿಕ್, ಚಿಲ್ಡ್ರನ್ಸ್ ಡೇ ಗ್ರೀಟಿಂಗ್ಸ್, ಚಿಲ್ಡ್ರನ್ಸ್ ಡೇ ಗ್ರೀಟಿಂಗ್ ಕಾರ್ಡ್, ಚಿಲ್ಡ್ರನ್ಸ್ ಡೇ ಸ್ಟಿಕ್ಕರ್ಸ್ ಫಾರ್ ವಾಟ್ಸ್ ಆಪ್, ಚಿಲ್ಡ್ರನ್ಸ್ ಡೇ ಫೋಟೋ ಫ್ರೇಮ್, ಚಿಲ್ಡ್ರನ್ಸ್ ಡೇ ಎಸ್‌ಎಂಎಸ್ ಮೆಸೇಜ್,ಚಿಲ್ಡರ್ನ್ ಡೇ ಸ್ಟೇಟಸ್ ವೀಡಿಯೋ 2019 ಹೀಗೆ ಪಟ್ಟಿ ಮುಂದುವರಿಸುತ್ತಲೇ ಸಾಗಬಹುದು.
ಶುಭಕೋರುವಿಕೆಗೆ ಡಿಫರೆಂಟ್ ಐಡಿಯಾ:
ಪ್ರತಿ ಆಪ್ ನಲ್ಲೂ ಕೂಡ ಬೇರೆಬೇರೆ ರೀತಿಯ ಕೆಲಸವನ್ನು ನೀವು ಸಾಧಿಸಬಹುದು. ಅತೀ ಹೆಚ್ಚು ಜನರು ವಾಟ್ಸ್ ಆಪ್ ನಲ್ಲೇ ಸಂದೇಶಗಳನ್ನು ರವಾನಿಸುವುದಕ್ಕೆ ಆದ್ಯತೆ ನೀಡುವುದರಿಂದಾಗಿ ನಾವಿಲ್ಲಿ ನಿಮಗೆ ಚಿಲ್ಡ್ರನ್ಸ್ ಡೇ ಸ್ಟಿಕ್ಕರ್ ಫಾರ್ ವಾಟ್ಸ್ ಆಪ್ ನ್ನು ಹೇಗೆ ಇನ್ಸ್ಟಾಲ್ ಮಾಡುವುದು ಮತ್ತು ಅದನ್ನು ಬಳಸಿ ವಾಟ್ಸ್ ಆಪ್ ನಲ್ಲಿ ಹೇಗೆ ಸ್ಟಿಕ್ಕರ್ ಗಳನ್ನು ಕಳುಹಿಸುವುದು ಎಂಬ ಬಗ್ಗೆ ಹಂತಹಂತವಾಗಿ ತಿಳಿಸಿಕೊಡುತ್ತೇವೆ.
ವಾಟ್ಸ್ ಆಪ್ ಸ್ಟಿಕ್ಕರ್:
ಮೊದಲಿಗೆ ಪ್ಲೇ ಸ್ಟೋರ್ ಗೆ ತೆರಳಿ ಚಿಲ್ಡ್ರನ್ಸ್ ಡೇ ಸ್ಟಿಕ್ಕರ್ ಫಾರ್ ವಾಟ್ಸ್ ಆಪ್ ಎಂದು ಹುಡುಕಾಡಿ. ಆಪ್ ನ್ನು ಇನ್ಸ್ಟಾಲ್ ಮಾಡಿ ಡೌನ್ ಲೋಡ್ ಮಾಡಿ. ಆಪ್ ತೆರೆದ ಕೂಡಲೇ ನಿಮಗೆ ಹಲವು ಸ್ಟಿಕ್ಕರ್ ಗಳು ಕಾಣಿಸುತ್ತದೆ. ಅದರಲ್ಲಿ ಆಡ್ ಟು ವಾಟ್ಸ್ ಆಪ್ ಎಂಬ ಆಯ್ಕೆ ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ. ಅದನ್ನು ಕ್ಲಿಕ್ಕಿಸಿ ಮೊದಲಿಗೆ ಸ್ಟಿಕ್ಕರ್ ಗಳನ್ನು ವಾಟ್ಸ್ ಆಪ್ ಗೆ ಸೇರಿಸಿಕೊಳ್ಳಿ. ನಂತರ ವಾಟ್ಸ್ ಆಪ್ ನ್ನು ತೆರೆದು ಯಾರಿಗೆ ಕಳುಹಿಸಬೇಕು ಎಂದುಕೊಂಡಿದ್ದೀರೋ ಅವರಿಗೆ ಸ್ಟಿಕ್ಕರ್ ನ್ನು ಆಯ್ಕೆ ಮಾಡಿ ಸೆಂಡ್ ಮಾಡಿದರೆ ಹೊಸ ಸ್ಟಿಕ್ಕರ್ ನ್ನು ನೀವು ನಿಮ್ಮವರಿಗೆ ಮಕ್ಕಳ ದಿನಾಚರಣೆಯ ವಿಶೇಷವಾಗಿ ಕಳುಹಿಸಿದಂತಾಗುತ್ತದೆ.
Comments are closed.