ನವದೆಹಲಿ : ದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿರುವ ಬೆನ್ನಲ್ಲೇ ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂದು ಉಪಕುಲಪತಿ ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದು, ಕೆಲ ಕಿಡಿಗೇಡಿಗಳು ಕ್ಯಾಂಪಸ್ನಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಧಕ್ಕೆ ಉಂಟು ಮಾಡಿದ್ದಾರೆ. ಪ್ರತಿಮೆಯ ಮೇಲೆ ಬಿಜೆಪಿ ಮತ್ತು ಸಂಘಪರಿವಾರದವರ ವಿರುದ್ಧ ಆಕ್ಷೇಪಾರ್ಹ ಸಂದೇಶಗಳನ್ನು ಬರೆದು ಕಿಡಿಕಾರದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಜೆಎನ್.ಯು ವಿದ್ಯಾರ್ಥಿಗಳ ಪ್ರತಿಭಟನೆ ತಾರಕಕ್ಕೇರಿದ್ದು, ಆಡಳಿತ ಮಂಡಳಿ ಹೆಚ್ಚಳ ಮಾಡಿದ್ದ ಶುಲ್ಕವನ್ನು ಕಡಿತಗೊಳಿಸಿದ್ದರೂ ಪ್ರತಿಭಟನೆ ಮುಂದುವರೆದಿದೆ. ನಿನ್ನೆ ಜೆಎನ್ಯು ಆಡಳಿತ ವಿಭಾಗಕ್ಕೆ ನುಗ್ಗಿದ ವಿದ್ಯಾರ್ಥಿಗಳು ಉಪಕುಲಪತಿ ಎಂ. ಜಗದೀಶ್ ಕುಮಾರ್ ವಿರುದ್ಧ ಆವರಣದಲ್ಲಿ ಸಂದೇಶಗಳನ್ನು ಬರೆದಿದ್ದರು. ‘ನೀವು ನಮ್ಮ ಉಪಕುಲಪತಿಗಳಿಲ್ಲ. ನಿಮ್ಮ ಸಂಘಕ್ಕೆ ನೀವು ಮರಳಿರಿ’ ಎಂಬ ಘೋಷಣೆನ್ನು ಉಪಕುಲಪತಿ ಕಚೇರಿಯ ಬಾಗಿಲುಗಳಿಗೆ ಪೇಂಟ್ ನಲ್ಲಿ ಬಳಿದಿದ್ದರು. ಪ್ರತಿಭಟನೆ ಮುಂದುವರೆಯುತ್ತಿರುವ ಬೆನ್ನಲ್ಲೇ ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ…
Comments are closed.