ಲಕ್ನೋ (ನ.18): ಜಗತ್ ಪ್ರಸಿದ್ಧ ತಾಜ್ ಮಹಲ್ ಹೊಂದಿರುವ ಉತ್ತರ ಪ್ರದೇಶದ ಆಗ್ರಾ ನಗರದ ಹೆಸರು ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಆಗ್ರಾ ನಗರವನ್ನು ಆಗ್ರಾವನ ಎಂದು ಬದಲಾಯಿಸುವ ಕುರಿತು ಬಿಜೆಪಿಯ ಕೆಲ ನಾಯಕರು ಸಲಹೆಯನ್ನು ನೀಡಿದ್ದಾರೆ. ಆಗ್ರಾವಾಲಗಳು ಹೆಚ್ಚಿರುವ ಪ್ರದೇಶ ಇದಾಗಿದ್ದು ಇಲ್ಲಿ ಮಹಾರಾಜ ಆಗ್ರಾಸೇನ್ ಪೂಜಿಸಲಾಗುತ್ತದೆ. ಈ ಹಿನ್ನೆಲೆ ಈ ಹೆಸರು ಬದಲಾವಣೆಗೆ ಪ್ರಸ್ತಾಪ ಬಂದಿದೆ,
ಉತ್ತರ ಆಗ್ರಾ ವಿಧಾನಸಭಾ ಕ್ಷೇತ್ರದಿಂದ ಶಾಸಕ ಜಗನ್ ಪ್ರತಾಪ್ ಗಾರ್ಗ್ ಈ ಕುರಿತು ಮುಖ್ಯಮಂತ್ರಿ ಆದಿತ್ಯನಾಥ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಅಂಬೇಡ್ಕರ್ ವಿಶ್ವವಿದ್ಯಾಲಯದ ಪರಿಣತರ ಸಲಹೆ ಕೇಳಲಾಗಿದೆ. ಆಗ್ರಾದಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಆಗ್ರಾದ ಹೆಸರಿನ ಕುರಿತು ಅಧ್ಯಯನ ನಡೆಸಿ ಸಲಹೆ ನೀಡಲು ಸೂಚನೆ ನೀಡಲಾಗಿದೆ.
ಈ ಹಿಂದೆಯೂ ಉತ್ತರ ಪ್ರದೇಶ ಸರ್ಕಾರ ಹೆಸರು ಮರುನಾಮಕರಣದ ಸೂಚನೆಗಳನ್ನು ನೀಡಿತ್ತು. ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂಬ ಹಳೆಯ ಹೆಸರಿಗೆ ಮರುನಾಮಕರಣ ಮಾಡಲಾಗಿತ್ತು. ಐತಿಹಾಸಿಕ ಮುಘಲ್ ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು. ಈದೀಗ ಆದಿತ್ಯನಾಥ್ ಸರ್ಕಾರದ ಕಣ್ಣು ಆಗ್ರಾದ ಮೇಲೆ ಬಿದ್ದಿದೆ. ಹೆಸರು ಬದಲಾವಣೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಕಾರಣ ಈಗಾಗಲೇ ತಾಜ್ ಮಹಲ್ನಿಂದಾಗಿ ಆಗ್ರಾ ಹೆಸರು ವಿಶ್ವ ವಿಖ್ಯಾತಿ ಪಡೆದಿದೆ ಎಂಬುದು ಹಲವರ ಮಾತು.
Comments are closed.