ಚಂಡೀಗಢ: ಕರ್ತಾರ್‌ಪುರ ಕಾರಿಡಾರ್ ಬಳಸಿಕೊಂಡು ಪ್ರತ್ಯೇಕತಾವಾದಿ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಭಾರತದ ಆತಂಕ ಮತ್ತೊಮ್ಮೆ ಸಾಬೀತಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಇತ್ತೀಚಿಗಷ್ಟೇ ಉದ್ಘಾಟನೆಯಾದ ಕರ್ತಾರ್ ಪುರ್ ಕಾರಿಡಾರ್ ನಲ್ಲಿ ಪಾಕಿಸ್ತಾನ ‘ಕಾಶ್ಮೀರ ಪಾಕಿಸ್ತಾನದ್ದು, ದೇಶದ ಹೆಮ್ಮೆ…. ಪಾಕಿಸ್ತಾನ ಸಶಸ್ತ್ರ ಪಡೆ’ಎಂಬ ಪೋಸ್ಟರ್ ಗಳನ್ನು ಹಾಕಿದೆ.
ಪಾಕಿಸ್ತಾನದ ಕರ್ತಾರ್ ಪುರ್ ಗುರುದ್ವಾರದ ಸಮೀಪ ಮತ್ತು ವಾಗಾ ಗಡಿ ಬಳಿ ಈ ಪೋಸ್ಟರ್ ಗಳನ್ನು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೋಸ್ಟರ್ ನ ಮೇಲ್ಭಾಗದಲ್ಲಿ ದೇಶದ ಹೆಮ್ಮೆ… ಪಾಕಿಸ್ತಾನ ಸಶಸ್ತ್ರ ಪಡೆಗಳು, ಮಧ್ಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಿತ್ರ ಹಾಗೂ ಕೆಳಗಡೆ ‘ಕಾಶ್ಮೀರ ಪಾಕಿಸ್ತಾನದ್ದು’ ಎಂದು ಬರೆಯಲಾಗಿದೆ.
ಕರ್ತಾರ್ ಪುರಕ್ಕೆ ಆಗಮಿಸುವ ಭಾರತೀಯ ಯಾತ್ರಿಗಳಿಗೆ ಪಾಕ್ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಿದ್ದು, ಪಾಕ್ ಅಧಿಕಾರಿಗಳು ನಮಗೆ ತುಂಬಾ ಗೌರವ ನೀಡುತ್ತಿದ್ದಾರೆ ಮತ್ತು ಉತ್ತಮ ಸಾರಿಗೆ ಸೌಲಭ್ಯ ನೀಡುತ್ತಿದ್ದಾರೆ ಎಂದು ಕೆಲವು ಹೆಸರು ಹೇಳಲು ಇಚ್ಛಿಸದ ಯಾತ್ರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9ರಂದು ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಅನ್ನು ಉದ್ಘಾಟಿಸಿದ್ದು, ಅಂದು 562 ಯಾತ್ರಿಗಳು ಭೇಟಿ ನೀಡಿದ್ದರು.
Comments are closed.