ಬಂಗಾಳದ ನಿವಾಸಿಗಳಿಗೆ ಮೀನು ಫೇವರಿಟ್ ಖಾದ್ಯ. ಸೀಫುಡ್ ಅಂದ್ರೆ ಅವರಿಗೆ ಪಂಚಪ್ರಾಣ, ಅದರಲ್ಲೂ ತಾಜಾ ಮೀನು ಸಿಕ್ರೆ ಬೆಂಗಾಳಿಗಳು ಬಿಡುವುದೇ ಇಲ್ಲ. ಅವರಿಷ್ಟದ ಮೀನು ಖರೀದಿಸಲು ಸಾವಿರಾರು ರೂಪಾಯಿ ಕೊಡಲು ಕೂಡ ಅವರು ಸಿದ್ಧರಿರ್ತಾರೆ.
ಕೇವಲ ಬೆಂಗಾಳಿಗಳು ಮಾತ್ರವಲ್ಲ ಮೀನನ್ನು ಇಷ್ಟಪಡುವವರಿಗೆಲ್ಲ ಹಿಲ್ಸಾ ಫಿಶ್ ಅಂದ್ರೆ ಅಚ್ಚುಮೆಚ್ಚು. ಇದು ಬಾಂಗ್ಲಾದೇಶದ ರಾಷ್ಟ್ರೀಯ ಮೀನು. ಒಂದು ಕೆಜಿ ಹಿಲ್ಸಾ ಮೀನಿಗೆ ಮಾರುಕಟ್ಟೆಯಲ್ಲಿ 2000 ರೂಪಾಯಿ ಇದೆ. ಇದನ್ನು ಬಿಟ್ರೆ ಚಿಟಾಲಾ ಹಾಗೂ ಭೆಟ್ಕಿ ಮೀನಿಗೆ ಬಹು ಬೇಡಿಕೆ.
ದಕ್ಷಿಣ ಏಷ್ಯಾ, ಪಪುವಾ ನ್ಯೂಗಿನಿಯಾ, ಉತ್ತರ ಆಸ್ಟ್ರೇಲಿಯಾದ ಮಂದಿ ಭೆಟ್ಕಿ ಮೀನಿನ ಖಾದ್ಯಗಳನ್ನು ಇಷ್ಟಪಡ್ತಾರೆ. ಫಿಶ್ ಫ್ರೈ ಹಾಗೂ ಫಿಶ್ ತಂದೂರಿಗೆ ಇದು ಬೆಸ್ಟ್ ಅಂತೆ. ಚಿಕ್ಕ ಭೆಟ್ಕಿ ಮೀನು 1-3 ಕೆಜಿ ತೂಕವಿರುತ್ತದೆ. ದೊಡ್ಡದರ ತೂಕ ಅಂದಾಜು 11-12 ಕೆಜಿ.
ಆದ್ರೆ ಇತ್ತೀಚೆಗಷ್ಟೆ ಹೌರಾ ಜಿಲ್ಲೆಯ ಮೀನುಗಾರನೊಬ್ಬ ಬರೋಬ್ಬರಿ 18.5ಕೆಜಿ ತೂಕದ ಭೆಟ್ಕಿ ಮೀನನ್ನು ಹಿಡಿದಿದ್ದ. ಈ ಮೀನು 12,000 ರೂಪಾಯಿಗೆ ಮಾರಾಟವಾಗಿದೆ. ತರುಣ್ ಬೇರಾ ಎಂಬ ಮೀನುಗಾರ ಇದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಸೇಲ್ ಮಾಡಿದ್ದಾನೆ.
Comments are closed.