ಹೊಸದಿಲ್ಲಿ: ವಾಟ್ಸ್‌ಆ್ಯಪ್ ಹ್ಯಾಕಿಂಗ್ ಬಗ್ಗೆ ಕಳವಳ ಹೆಚ್ಚಿರುವ ನಡುವೆಯೇ, ‘ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ’ (ಸಿಇಆರ್‌ಟಿ-ಐಎನ್) ಮಾಹಿತಿ ಕಳವು ಅಪಾಯಗಳನ್ನು ತಡೆಯಲು ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ಎಂಪಿ4’ ಫಾರ್ಮೆಟ್‌ನ ಫೈಲ್ ಮೂಲಕ ನಡೆಸಲಾಗುವ ಹ್ಯಾಕಿಂಗ್ ತಡೆಯಲು ಮೊದಲನೆಯದಾಗಿ ‘ವಾಟ್ಸ್‌ಆ್ಯಪ್’ ಅನ್ನು ಲೇಟೆಸ್ಟ್ ಆವೃತ್ತಿಗೆ ಅಪ್‌ಡೇಟ್ ಮಾಡಬೇಕೆಂದು ಸೂಚಿಸಲಾಗಿದೆ.
ಹ್ಯಾಕರ್‌ಗಳು ‘ಎಂಪಿ4’ ಫೂಲ್ ಮೂಲಕ ಟಾರ್ಗೆಟ್ ಮಾಡಲಾದ ವ್ಯಕ್ತಿಗಳ ವಾಟ್ಸ್‌ಆ್ಯಪ್ ದುರ್ಬಳಕೆ ಮಾಡಬಹುದು. ಹ್ಯಾಕರ್‌ಗಳು ಕಳುಹಿಸಿದ ‘ಎಪಿ4’ ಫೈಲ್, ಯಾವುದೇ ಅನುಮತಿಯ ಅಗತ್ಯವಿಲ್ಲದೆ ವಾಟ್ಸ್‌ಆ್ಯಪ್ ಮೂಲಕ ಮೊಬೈಲ್‌ಗೆ ಡೌನ್‌ಲೋಡ್ ಆಗಬಲ್ಲದು. ಹೀಗೆ ಕಳುಹಿಸಲಾದ ಫೈಲ್ ಮೂಲಕ ಹ್ಯಾಕರ್‌ಗಳು ಕೋಡ್‌ಗಳನ್ನು ರನ್ ಮಾಡಿ ಮೊಬೈಲ್‌ನಲ್ಲಿರುವ ಯಾವುದೇ ಮಾಹಿತಿಯನ್ನು ಕದಿಯಬಹುದು ಅಥವಾ ನಿರ್ದಿಷ್ಟ ಮೊಬೈಲ್‌ಗೆ ಸೇವೆಗಳನ್ನು ನಿರ್ಬಂಧಿಸಬಹುದು ಎಂದು ಸಂಸ್ಥೆ ಎಚ್ಚರಿಸಿದೆ.
ಆಂಡ್ರಾಯ್ಡ್ 2.19.274, ಐಓಎಸ್ 2.19.100 ಮತ್ತು ಅದಕ್ಕೂ ಹಿಂದಿನ ಆವೃತ್ತಿಗಳಿಗಾಗಿ ಬಿಡುಗಡೆಗೊಂಡ ವಾಟ್ಸ್‌ಆ್ಯಪ್‌ನಲ್ಲಿಈ ಅಪಾಯ ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ.
Comments are closed.