ಲಾಹೋರ್:ಗುರುದ್ವಾರ ದರ್ಬಾರ್ ಸಾಹಿಬ್ ದರ್ಶನಕ್ಕಾಗಿ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದ ಸಿಖ್ ಯುವತಿ ನಾಪತ್ತೆಯಾಗಿದ್ದಾಳೆ.
ಏಷ್ಯನ್ ನ್ಯೂಸ್ ಇಂಟರ್ ನ್ಯಾಷನಲ್ (ಎಎನ್ಐ) ವರದಿಯ ಪ್ರಕಾರ ಗುರುದ್ವಾರಕ್ಕೆ ತೆರಳಿದ್ದ ಜಾಥದ ಭಾಗವಾಗಿದ್ದಳು ಈ ಯುವತಿ. ಈ ನಡುವೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪೊಲೀಸ್ ಆಡಳಿತ ಲಾಹೋರ್ ಮತ್ತು ಫೈಸಲಾಬಾದ್ ನಗರಗಳಿಂದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ.
ಭಾರತ-ಪಾಕ್ ನಡುವೆ ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಯಾದ ಒಂದು ತಿಂಗಳಲ್ಲೇ ಈ ಘಟನೆ ನಡೆದಿದೆ.
Comments are closed.