ರಾಷ್ಟ್ರೀಯ

ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಕರಿ ಭೋಜನ!

Pinterest LinkedIn Tumblr


ತೆಲಂಗಾಣ: ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರಗೈದು ಶವವನ್ನು ಸುಟ್ಟುಹಾಕಿದ್ದ ನರರಾಕ್ಷಸರನ್ನು ಶಿಕ್ಷಿಸಲು ತಮಗೊಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ ಜೈಲಿನಲ್ಲಿ ಸುರಕ್ಷಿತವಾಗಿರುವ ಅತ್ಯಾಚಾರಿಗಳಿಗೆ ಮಾತ್ರ ರಾಜಾತಿಥ್ಯ ದೊರೆಯುತ್ತಿದೆ.

ತೆಲಂಗಾಣದ ಜೈಲಿನಲ್ಲಿ ಬಿಗಿ ಭದ್ರತೆಯಲ್ಲಿರುವ ನಾಲ್ವರು ಅತ್ಯಾಚಾರಿಗಳಿಗೆ ಭೂರಿ ಭೋಜನ ಪೂರೈಕೆ ಮಾಡಲಾಗಿದೆ. ಅತ್ಯಾಚಾರಿಗಳಿಗೆ ದಾಲ್ ರೈಸ್ ನೀಡಲಾಗಿದ್ದು, ಮಟನ್ ಕರಿಯನ್ನು ಉಣಬಡಿಸಲಾಗಿದೆ.

ಈ ನಡುವೆ ಅತ್ಯಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ 3 ಪೊಲೀಸ್ ಅಧಿಕಾರಿಗಳನ್ನು ನಿರ್ಲಕ್ಷ್ಯಕ್ಕಾಗಿ ಅಮಾನತು ಮಾಡಲಾಗಿದೆ.

Comments are closed.