ರಾಷ್ಟ್ರೀಯ

ತಂಗ್ಧರ್‌ನಲ್ಲಿ ಮತ್ತೆ ಹಿಮಪಾತ : ಕಾಣೆಯಾದ ಸೇನಾ ಯೋಧರ ಪತ್ತೆಗಾಗಿ ಪಾರುಗಾಣಿಕಾ ತಂಡ ರಚನೆ

Pinterest LinkedIn Tumblr

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಮಪಾತ ಸಂಭವಿಸಿದ್ದು , ಯೋಧರ ಸಾವು-ನೋವಿನ ವರದಿಯಾಗಿದೆ. ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತವಾಗಿದ್ದು ಸೇನಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದು, ಅವರೂ ಕೂಡ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಬಳಿಕ ಕಾಣೆಯಾದ ಯೋಧರನ್ನು ಹುಡುಕಲು ಸೇನೆಯು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ವೇಳೆ ಓರ್ವ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಕುಪ್ವಾರಾದಲ್ಲಿ ಹಿಮದ ಕೆಳಗೆ ಸಿಕ್ಕಿ ಬಿದ್ದ ಕಾಣೆಯಾದ ಸೇನಾ ಯೋಧರ ಪತ್ತೆಗಾಗಿ ಪಾರುಗಾಣಿಕಾ ತಂಡ ಪ್ರಯತ್ನಿಸುತ್ತಿದೆ.

ಆದಾಗ್ಯೂ, ಕಠಿಣ ಹವಾಮಾನ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ. ಈ ಮೊದಲು ನ.18ರಂದು ಸಿಯಾಚಿ ನ್ ಹಿಮ ನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ನಡೆದ ಘಟನೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದರು.

Comments are closed.