ರಾಷ್ಟ್ರೀಯ

12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪುತ್ರಿ ಫೇಸ್‌ಬುಕ್ ಮೂಲಕ ಸಿಕ್ಕಿದ್ದೇಗೆ?

Pinterest LinkedIn Tumblr


ವಿಜಯವಾಡ: ಇತ್ತೀಚೆಗೆ ಸೋಶಿಯಲ್ ಮೀಡಿಯಾ ಬಳಸದವರೇ ಇಲ್ಲ. ಅಂತಹ ಸಾಮಾಜಿಕ ಮಾಧ್ಯಮದ ಮೂಲಕ 12 ವರ್ಷಗಳ ಹಿಂದೆ ನಾಪತ್ತೆಯಾದ ಹುಡುಗಿ, ಅಂತಿಮವಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಲಿದ್ದಾಳೆ.

ವಾಸ್ತವವಾಗಿ, ಭವಾನಿ ಎಂಬ ಹುಡುಗಿ ವಂಶಿ ಕೃಷ್ಣ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಬಂದಳು. ಹಾಗೆ ಮಾತನಾಡುವ ವೇಳೆ ಭವಾನಿ ತನ್ನ ನಾಲ್ಕನೇ ವಯಸ್ಸಿನಲ್ಲಿ ವಿಜಯನಗರಂ ಜಿಲ್ಲೆಯ ಚೀಪುರುಪಳ್ಳಿಯಿಂದ ತನ್ನ ಹೆತ್ತವರಿಂದ ಬೇರ್ಪಟ್ಟಿದ್ದಾಳೆ ಎಂದು ವಂಶಿಗೆ ತಿಳಿಸಿದ್ದಾಳೆ. ಆಕೆಯನ್ನು ಮಹಿಳೆಯೊಬ್ಬರು ದತ್ತು ಪಡೆದರು ಮತ್ತು ಅಂದಿನಿಂದ ಆಕೆ ವಿಜಯವಾಡದಲ್ಲಿ ವಾಸಿಸುತ್ತಿದ್ದಳು. ವಂಶಿ ಕೃಷ್ಣ ಅವರು ಭವಾನಿಯನ್ನು ಆಕೆಯ ಹೆತ್ತವರೊಂದಿಗೆ ಹೋಗಲು ಬಯಸುವೆಯಾ ಎಂದು ಕೇಳಿದ್ದಾರೆ. ಅದಕ್ಕೆ ಆಕೆ ಹೌದು ಎಂದಿದ್ದಳಂತೆ.

ಬಳಿಕ ಭವಾನಿಯಿಂದ ವಿವರ ಪಡೆದಿದ್ದ ವಂಶಿಕೃಷ್ಣ ಸೋಶಿಯಲ್ ಮೀಡಿಯಾ ನೆಟ್‌ವರ್ಕ್‌ನಲ್ಲಿ ಭವಾನಿಯ ಕುಟುಂಬದವರು ಆಕೆಯ ಪೋಷಕರು ಮತ್ತು ಒಡಹುಟ್ಟಿದವರು ಯಾರಾದರೂ ಸಿಗಬಹುದೆಂದು ಹುಡುಕಲಾರಂಭಿಸಿದರು. ಇದರ ಅಂಗವಾಗಿ ವಂಶಿ, ಕೆಲವು ಜನರಿಗೆ ಸಂದೇಶವನ್ನು ಕಳುಹಿಸಿದ್ದು, ಅದರಲ್ಲಿ ಒಬ್ಬರು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದರು. ವಂಶಿ ಅವರು ಹುಡುಗಿಯಿಂದ ಪಡೆದ ವಿವರವನ್ನು ಪ್ರತಿಕ್ರಿಯೆಯಾಗಿ ಬಂದ ಸಂದೇಶದ ವಿವರ ಎರಡನ್ನೂ ತಾಳೆ ಮಾಡಿದರಂತೆ. ಮಾಹಿತಿ ಹೊಂದಿಕೆಯಾದ ಬಳಿಕ ಅವರು ವಿಡಿಯೋ ಕರೆಗಾಗಿ ವಿನಂತಿಸಿದರು. ಕೊನೆಗೆ ಭವಾನಿ ತನ್ನ ಕುಟುಂಬವನ್ನು ಸೇರುವಂತಾಯಿತು. ಈ ರೀತಿಯಾಗಿ ಕೊನೆಗೂ ಫೇಸ್‌ಬುಕ್‌ನಲ್ಲಿ ತಾವು ಭವಾನಿಯ ಸಹೋದರನನ್ನು ಗುರುತಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ವಂಶಿ ಸುದ್ದಿಸಂಸ್ಥೆ ಎಎನ್‌ಐಗೆ ವಿವರಿಸಿದ್ದಾರೆ.

ಇನ್ನು 12 ವರ್ಷಗಳ ಬಳಿಕ ಹೆತ್ತವರೊಂದಿಗೆ ತನ್ನ ಮನೆಗೆ ಹೋಗುತ್ತಿರುವುದು ತನಗೆ ತುಂಬಾ ಸಂತೋಷವಾಗಿದೆ ಎಂದು ಭವಾನಿ ಹರ್ಷವ್ಯಕ್ತಪಡಿಸಿದ್ದಾರೆ.

Comments are closed.