ರಾಷ್ಟ್ರೀಯ

ಬೆಂಕಿ ಅವಘಡದಲ್ಲಿ 11 ಮಂದಿ ಕಾರ್ಮಿಕರನ್ನು ಬದುಕಿಸಿದ!

Pinterest LinkedIn Tumblr


ನವದೆಹಲಿ: ಅನಾಜ್​ ಮಂಡಿಯಲ್ಲಿ ಬಿದ್ದ ಬೆಂಕಿಯಲ್ಲಿ ಸಾವು ನಾಟ್ಯವಾಡುತ್ತಿತ್ತು. ಅಂತಹ ಬೆಂಕಿ ಕೆನ್ನಾಲಿಗೆ ಲೆಕ್ಕಿಸದೇ ಅಗ್ನಿಶಾಮಕ ದಳದ ರಾಜೇಶ್​ ಶುಕ್ಲಾ ಒಳ ನುಗ್ಗಿ ಬದುಕಿಸಿದ್ದು 11 ಮಂದಿಯನ್ನು.

ಭಾನುವಾರ ಬೆಳ್ಳಂಬೆಳಗ್ಗೆ ದೆಹಲಿಯ ಅನಾಜ್​​ ಮಂಡಿ ಏರಿಯಾದ ರಾಣಿ ಝಾನ್ಸಿ ರಸ್ತೆಯಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 43.

ಘಟನೆಯಲ್ಲಿ ಅನೇಕ ಮಂದಿಯನ್ನು ರಕ್ಷಣಾ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿವೆ.

ಇಂತಹ ರಕ್ಷಣೆ ಕಾರ್ಯದಲ್ಲಿ ರಾಜೇಶ್​ ಶುಕ್ಲಾ ಗಾಯಗೊಂಡಿದ್ದಾರೆ. ರಾಜೇಶ್​ನಂತಹ ಅದೆಷ್ಟೋ ಸಿಬ್ಬಂದಿ ಗಾಯಗೊಂಡ, ಎಚ್ಚರ ತಪ್ಪಿದ ಕಾರ್ಮಿಕರನ್ನು ಹೆಗಲ ಮೇಲೆ ಹೊತ್ತು ಹೊರಬಂದು ಹೊಸ ಬದುಕಿಗೆ ಬಿಟ್ಟಿದ್ದಾರೆ.

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್​ ಅವರನ್ನು ಭೇಟಿ ಮಾಡಿದ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್​, ರಾಜೇಶ್​ ಶುಕ್ಲಾ ನಿಜವಾದ ಹೀರೊ. 11 ಮಂದಿಯನ್ನು ಬದುಕಿಸಿದ್ದಾರೆ. ಆತ ತನ್ನ ಬೆನ್ನು ನೋವು ಬರುವವರೆಗೆ ತನ್ನ ಕಾರ್ಯ ನಿರ್ವಹಿಸಿದ್ದಾರೆ. ಅವರ ಕೆಲಸಕ್ಕೆ ಸೆಲ್ಯೂಟ್​ ಎಂದು ಅವರ ಜತೆಗೆಇನ ಫೋಟೋವನ್ನು ಟ್ವಿಟ್​ ಮಾಡಿದ್ದಾರೆ.

ದೆಹಲಿ ಪೊಲೀಸರು ಕಾರ್ಖಾನೆಯ ಇಬ್ಬರು ಮಾಲೀಕರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಕ್ರೈಂ ಬ್ರಾಂಚ್​ ತನಿಖೆ ಕೈಗೊಂಡಿದೆ.

Comments are closed.