ಗುಜರಾತ್: ಒಂದು ವರ್ಷದಿಂದ ನಿರಂತರವಾಗಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುತ್ತಿದ್ದ ಮೂವರು ದುರುಳರನ್ನು ಭಾವ್ ನಗರ್ ಪೊಲೀಸರು ಬಂಧಿಸಿದ್ದಾರೆ. ದುರಂತ ಎಂದರೇ ಬಾಲಕಿಯ ತಾಯಿಯೇ ಮಗಳನ್ನು ಅತ್ಯಾಚಾರ ಮಾಡುವಂತೆ ಮೂವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.
ಈ ಘಟನೆ ಭುಥಿಯಾ ಗ್ರಾಮದಲ್ಲಿ ನಡೆದಿದ್ದು ಶನಿವಾರ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಬಾಲಕಿಯ ತಂದೆ ಈ ಕುರಿತು ಪ್ರಕರಣ ದಾಖಲಿಸಿದ್ದು , ಮೂವರು ವ್ಯಕ್ತಿಗಳು ಕಳೆದ ಒಂದು ವರ್ಷದಿಂದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದು ಪತ್ನಿಯೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಳು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ, ತಂದೆ ಹೊರಹೋಗಿದ್ದ ಸಮಯ ನೋಡಿ ಮೂವರು ಮನೆಗೆ ಪ್ರವೇಶ ಮಾಡಿ ಅತ್ಯಾಚಾರಗೈಯುತ್ತಿದ್ದರು. ತಾಯಿಯು ಕೂಡ ಈ ವೇಳೆ ಮನೆಯಲ್ಲಿರುತ್ತಿದ್ದಳು ಎಂದಿದ್ದಾಳೆ.
ಆರೋಪಿಗಳಾದ ಶಾಂತಿ ದಾಂದುಕಿಯಾ(46), ಬಾಬು ಭಾಯ್ ಸರ್ತಾನ್ ಪರ,(43) ಮತ್ತು ಚಂದ್ರೇಶ್ ಸರ್ತಾನ್ ಪರ ರನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಾಯಿ ಪರಾರಿಯಾಗಿದ್ದಾರೆ.
Comments are closed.