ರಾಷ್ಟ್ರೀಯ

ಮೆಟ್ರೋದಲ್ಲಿ ಅಪ್ಪಿ ಮುದ್ದಾಡಿಕೊಂಡ ಜೋಡಿ

Pinterest LinkedIn Tumblr


ನವದೆಹಲಿ: ಇತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸಿಕೊಂಡು ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಜೋಡಿ ಇದೇ ರೀತಿಯ ವರ್ತನೆಯನ್ನು ತೋರಿದೆ.

ಹೌದು. ದೆಹಲಿ ಮೆಟ್ರೋದಲ್ಲಿ ನಿಂತುಕೊಂಡಿದ್ದ ಜೋಡಿಯೊಂದು ಏಕಾಏಕಿ ತಬ್ಬಿಕೊಂಡು ಮುದ್ದಾಡಿದ್ದು, ಪ್ರಯಾಣಿಕರನ್ನು ಅಸಹ್ಯಕ್ಕೀಡಾಗುವಂತೆ ಮಾಡಿದೆ. ಈ ಜೋಡಿ ಚಲಿಸುತ್ತಿರುವ ಮೆಟ್ರೋದಲ್ಲಿ ಪ್ರಯಾಣಿಕರಿದ್ದಾರೆ ಎಂಬುದನ್ನೂ ಮರೆತು ತಮ್ಮಷ್ಟಕ್ಕೆ ತಾವೇ ಮೈಮರೆಯವಲ್ಲಿ ಬ್ಯುಸಿಯಾಗಿದ್ದಾರೆ.

ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಬಳಿಕ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಶೀಘ್ರವೇ ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೆಟ್ರೋ ರೈಲಿನೊಳಗೆ ಪ್ರಯಾಣಿಕರ ಮಧ್ಯೆ ನಿಂತುಕೊಂಡ ಜೋಡಿ ಪರಸ್ಪರ ಅಪ್ಪಿಕೊಂಡು ಕಿಸ್ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ವಾತ್ಸಲ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದಾರೆ.

ಈ ಸಂಬಂಧ ದೆಹಲಿಯ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಆ ಜೋಡಿಯನ್ನು ಪತ್ತೆ ಹಚ್ಚಿ ಕೂಡಲೇ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಹಿಂದೆ ಜೋಡಿಯೊಂದು ಪ್ರಯಾಣಿಕರು ತುಂಬಿದ್ದ ಲೋಕದ ಪರಿಜ್ಞಾನವೇ ಇಲ್ಲದಂತೆ ಪರಸ್ಪರ ಕಿಸ್ ಮಾಡಿಕೊಳ್ಳುವಲ್ಲಿ ನಿರತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹುಡುಗ- ಹುಡುಗಿ ಎದುರು ಕೂತಿದ್ದ ಪ್ರಯಾಣಿಕನೇ ಅವರು ಕಿಸ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಇದಕ್ಕೆ ಸಾಕಷ್ಟು ಪರ ವಿರೋಧ ಕಮೆಂಟ್ ಗಳು ಬಂದಿದ್ದವು.

Comments are closed.