ನವದೆಹಲಿ : ಟರ್ಕಿಯಿಂದ ಹೆಚ್ಚುವರಿ 12,500 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಜನವರಿಯಿಂದ ಈರುಳ್ಳಿ ಭಾರತಕ್ಕೆ ರವಾನೆಯಾಗಲಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ಸ್ಥಿರೀಕರಣ ನಿಧಿ ನಿರ್ವಹಣಾ ಸಮಿತಿಯ ನಿರ್ದೇಶನದನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪೈಕಿ ಎರಡು ಆದೇಶಗಳನ್ನು ಟರ್ಕಿ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ನೀಡಲಾಗಿದ್ದು, ಇನ್ನೊಂದು ಜಾಗತಿಕ ಟೆಂಡರ್ ಆಗಿದೆ. ಈ ಪ್ರತಿಯೊಂದು ಟೆಂಡರ್ 5,000 ಟನ್ ಈರುಳ್ಳಿಗಾಗಿ ಇದೆ. ಎಂಎಂಟಿಸಿ ಸರ್ಕಾರಿ ಖರೀದಿ ಸಂಸ್ಥೆ. ಆಮದು ಸೇರಿದಂತೆ ವಿವಿಧ ಕ್ರಮಗಳಿಂದ ಈರುಳ್ಳಿ ದೇಶೀಯ ಪೂರೈಕೆಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆಮದುಗಳಿಂದ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಈರುಳ್ಳಿಯ ಬೆಲೆಯನ್ನು ನಿಗ್ರಹಿಸಲು ಪ್ರಯತ್ನಿಸಲಾಗುತ್ತಿದೆ.
ಕಳೆದ ವಾರಾಂತ್ಯದ ವರೆಗೆ ಕೆ.ಜಿ.ಗೆ 70-80 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಪ್ರತಿ ಕೆ.ಜಿ.ಗೆ 100-150 ರೂ. ತಲುಪಿದೆ. ಮುಂದಿನ ವಾರದಿಂದ ದೇಶಾದ್ಯಂತ ಹೊಸ ಈರುಳ್ಳಿ ಬೆಳೆ ಆಗಮನವಾಗಲಿದ್ದು, ಇದು ಬೆಲೆ ಏರಿಕೆಯ ಮೇಲೆ ಪ್ರಭಾವ ಬೀರಲಿದೆ.
Comments are closed.