ರಾಷ್ಟ್ರೀಯ

ಬಂದೂಕುಗಳು ಇರುವುದು ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕಲ್ಲ: ಕೇಂದ್ರ ಸಚಿವ ಸುರೇಶ ಅಂಗಡಿ

Pinterest LinkedIn Tumblr


ಬೆಳಗಾವಿ: ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಬಂದೂಕು ಗಳಿರುವುದು ಮನೆಯಲ್ಲಿಟ್ಟು ಪೂಜೆ ಮಾಡುವದಕ್ಕಲ್ಲ ಎಂದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಹಿಂಸಾಚಾರದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡದಂತೆ ಆಯಾ ಸರಕಾರಗಳು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಹೇಳಿದರು.

ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಇಸ್ಲಾಂ ರಾಷ್ಟ್ರ ಎಂದು ಘೋಷಣೆ ಮಾಡಿದ ಮೇಲೆ ಮೂರು‌ ರಾಷ್ಟ್ರದ ಜನ ಸೌಹಾರ್ದತೆಗಾಗಿ ಅಲ್ಲಿನ ಜನ ಭಾರತಕ್ಕೆ ಬರಲು ತುದಿಗಾಗಲಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಜಾರಿಗೆ ತರಲಾಗುತ್ತಿರುವ ಪೌರತ್ವ ಕಾಯ್ದೆಯಿಂದ ಯಾವುದೆ ಸಮಸ್ಯೆ ಇಲ್ಲ. ಆದರೆ ಇದನ್ನು ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು.

ವಿರೋಧ ಪಕ್ಷದವರು ಈ ಕಾಯ್ದೆಯನ್ನು ವಿರೋಧಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಾರ್ವಜನಿಕ ಹಾಗೂ ರೈಲ್ವೆ ಇಲಾಖೆಯ ಆಸ್ತಿಪಾಸ್ತಿ ಹಾನಿ ಮಾಡಬಾರದು. ಒಂದು ವೇಳೆ ಮಾಡಿದರೆ ಆಯಾ ರಾಜ್ಯದ ಸರಕಾರ ಕಠಿಣ ಕ್ರಮ ಕೈಗೊಳ್ಳಲು‌ ಮುಂದಾಗುತ್ತಾರೆ ಎಂದರು.

ಭಾರತದಲ್ಲಿ ನುಸುಳುಕೋರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ಎಲ್ಲ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಆದ್ದರಿಂದ ಪೌರತ್ವ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ಭಾರತದ ಜನರಿಗೆ ಯಾವುದೇ‌ ರೀತಿಯ ತೊಂದರೆ ಇಲ್ಲ. ಇದನ್ನು ವಿರೋಧ ಪಕ್ಷದವರು ವಿನಾಕಾರಣ ಜನರನ್ನು ಎತ್ತಿಕಟ್ಟುವ ಕೆಲಸ‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು

ಆಯಾ ರಾಜ್ಯ ಸರಕಾರಗಳಿಗೆ ರೈಲ್ವೆ ಇಲಾಖೆಯನ್ನು ರಕ್ಷಣೆ ಮಾಡುವಂತೆ ಸೂಚಿಸಲಾಗಿದೆ. ಒಂದು ರೈಲು ನಿರ್ಮಾಣ ಮಾಡಬೇಕಾದರೆ 15 ಲಕ್ಷ‌ಕ್ಕೂ ಅಧಿಕ‌ ಬರುತ್ತದೆ. ಸರಕಾರದ‌ ಆಸ್ತಿ ಹಾನಿ ಮಾಡುವವರ ವಿರುದ್ದ ಗುಂಡಿಕ್ಕಿ ಎಂದು ಆಕ್ರೋಶದಿಂದ ಹೇಳಿಕೆ‌ ನೀಡಿದ್ದೆ ಎಂದು ಸಮರ್ಥಿಸಿಕೊಂಡರು.

ಮಾಜಿ ಸಚಿವ ಯು.ಟಿ.ಖಾದರ್ ಜವಬ್ದಾರಿಯುತದಲ್ಲಿರುವವರು. ಒಂದುವೇಳೆ ಅವರು ಪ್ರಚೋಧನಕಾರಿ ಹೇಳಿಕೆ ನೀಡಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Comments are closed.