ನಾಗಪಟ್ಟಣಂ: 14 ವರ್ಷದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಕ್ಸೊ ಕಾಯ್ದೆಯಡಿ ತಿರುವರೂರು ಜಿಲ್ಲೆಯ ಹೆಡ್ ಕಾನ್ಸ್ ಟೇಬಲ್ ಒಬ್ಬರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ.
ತಿರುವರೂರಿನ ನಾನ್ನಿಲಾಮ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆರ್. ಅಯ್ಯಸಾಮಿ (41) ಬಂಧಿತ ಆರೋಪಿ.
ಸಂತ್ರಸ್ತೆಯ ತಂದೆ ಹಾಗೂ ತಾಯಿ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ಆಗಿರುವ ತಂದೆ ಮತ್ತೆ ಒಂದುಗೂಡಿಸುವಂತೆ ಪೊಲೀಸರ ಮೊರೆ ಹೋಗಿದ್ದರು.
ವಿಚಾರಣೆಗಾಗಿ ಶನಿವಾರ ಅಯ್ಯಸಾಮಿ ಸಂತ್ರಸ್ತೆಯ ಮನೆಗೆ ಬಂದಿದ್ದಾರೆ. ಆಕೆಯ ಜೊತೆಯಲ್ಲಿದ್ದ 12 ವರ್ಷದ ಸಹೋದರನನ್ನು ಸ್ವೀಟ್ ತರುವಂತೆ ಹೇಳಿ ಮನೆಯಿಂದ ಹೊರಗೆ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಆ ಹುಡುಗಿ ಕಿರುಚುಕೊಳ್ಳುತ್ತದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಆಕೆಯ ತಂದೆ ಮನೆಗೆ ಬಂದಾಗ ನಡೆದ ವಿಷಯವನ್ನೆಲ್ಲಾ ಹೇಳಲಾಗಿದ್ದು, ನಂತರ ಎಸ್ ಪಿ ಕಚೇರಿಗೆ ಹೋಗಿ ದೂರು ದಾಖಲಿಸಿದ್ದಾರೆ.
ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಅಯ್ಯಸಾಮಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮನ್ಸ್ ನೀಡಿದ್ದರು. ನಂತರ ಆತನನ್ನು ಬಂಧಿಸಲಾಗಿದೆ. ಲೈಂಗಿಕ ಕಿರುಕುಳಕ್ಕೊಳಗಾದ ಸಂತ್ರಸ್ತೆಯನ್ನು ತಿರವರೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.