ತಿರುಪತಿ:ತಿರುಮಲ ತೀರ್ಥಯಾತ್ರೆಯ ಭಾಗವಾಗಿ ಈ ಬಾರಿ ಹಿರಿಯ ನಾಗರಿಕರ ತಂಡವೊಂದು ತಿರುಪತಿಗೆ ಭೇಟಿ ನೀಡಿದೆ. ವಿಶೇಷವೆಂದರೆ ಈ ತಂಡದ ಎಲ್ಲ ಭಕ್ತಾದಿಗಳು ಮುಸ್ಲಿಂ ಧರ್ಮಕ್ಕೆ ಸೇರಿದ್ದಾರೆ. ಈ ಕುರಿತು ಝೀ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಸ್ವಾಮಿ ಅಲ್ಲಾಹ್ ತಮ್ಮಲ್ಲಿ ಧೈರ್ಯ ತುಂಬಿರುವ ಕಾರಣ ತಾವು ಪಾದಯಾತ್ರೆ ನಡೆಸುವ ಮೂಲಕ ತಿರುಪತಿ ತಲುಪಿರುವುದಾಗಿ ಹೇಳಿದ್ದಾರೆ. ವರ್ಷದಲ್ಲಿ ಎರಡು ಬಾರಿ ತಿರುಪತಿಗೆ ಭೇಟಿ ನೀಡುವ ಹಿಂದೂ ಭಕ್ತಾದಿಗಳು ತಿರುಮಲದಲ್ಲಿ ತಿಮ್ಮಪ್ಪನ ದರುಶನ ಭಾಗ್ಯ ಪಡೆದು ಪುನೀತರಾಗುತ್ತಾರೆ.
ಸರಣಿ ರಜೆಗಳು ಬಂದ ಕಾರಣ ಈ ಬಾರಿ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತಾದಿಗಳ ದಂಡೆ ಹರಿದುಬಂದಿದೆ. ಹೀಗಾಗಿ ಎಲ್ಲ VIP ಹಾಗೂ ಪ್ರೋಟೋಕಾಲ್ಸ್ ದರುಶನಗಳನ್ನು ರದ್ದುಗೊಳಿಸಲಾಗಿದೆ. ಈ ಬಾರಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರುಶನಕ್ಕೆ ತಿಮ್ಮಪ್ಪನ ಹಿಂದೂ ಭಕ್ತಾದಿಗಳ ಜೊತೆಗೆ ಮುಸ್ಲಿಂ ಭಕ್ತಾದಿಗಳೂ ಕೂಡ ಆಗಮಿಸಿದ್ದು, ಶುದ್ಧ ಮನಸ್ಸಿನಿಂದ ಅವರು ಸ್ವಾಮಿಯನ್ನು ಆರಾಧಿಸುತ್ತಾರೆ.
ಆಂಧ್ರ ಪ್ರದೇಶದ ಗುದುರು ನಲ್ಲೋರಾದಿಂದ ಬಂದ ಈ ತಂಡದ ಕೆಲ ಬುಧುವಾರ ತಿರುಪತಿಗೆ ತಲುಪಿದ್ದಾರೆ. ಇವರೆಲ್ಲರೂ ಮುಸ್ಲಿಂ ಧರ್ಮದ ಬಾಂಧವರಾಗಿದ್ದಾರೆ. ಇಲ್ಲಿ ಬೆರಗುಗೊಳಿಸುವ ಸಂಗತಿ ಎಂದರೆ, ಇವರೆಲ್ಲರೂ ಹಿರಿಯ ನಾಗರಿಕರಾಗಿದ್ದು, ನಡೆದಾಡಲು ಸಾಕಷ್ಟು ಸಮರ್ಥರಾಗಿಲ್ಲ. ಆದರೆ, ಅವರಲ್ಲಿನ ಧೈರ್ಯ ಅವರನ್ನು ಇಲ್ಲಿಗೆ ಕರೆತಂದಿದೆ. ತಮ್ಮ ಯಾತ್ರೆ ಕುರಿತು ಝೀ ಮೀಡಿಯಾ ಜೊತೆ ಮಾತನಾಡಿರುವ 65 ವರ್ಷ ವಯಸ್ಸಿನ ಕರೀಂಮುನೀಸಾ, ಅಲ್ಲಾಹ್ ನೆ ನಮಗೆ ಬೆಟ್ಟ ಏರಲು ಶಕ್ತಿ ನೀಡಿದ್ದಾನೆ, ನಾವು ಗೋವಿಂದನನ್ನು ಆರಾಧಿಸುತ್ತೇವೆ ಹಾಗೂ ಗೋವಿಂದನ ಮೇಲೆ ಭರವಸೆ ಇಟ್ಟು ಆತನ ದರುಶನ ಪಡೆಯಲು ಬಂದಿರುವುದಾಗಿ ಹೇಳುತ್ತಾರೆ.
ತಮ್ಮ ಯಾತ್ರೆಯ ಕುರಿತು ಮಾತನಾಡಿರುವ ಮತ್ತೋರ್ವ ಯಾತ್ರಿ ಶೇಖ್ ಮಸ್ಥಾನಮ್ಮಾ, ನಾವು ದರ್ಶನಕ್ಕಾಗಿ ಕಾಯುತ್ತಿರುವೆವು. ದರುಶನ ಪಡೆದೇ ಇಲ್ಲಿಂದ ಮರಳುವೆವು ಎಂದಿದ್ದಾರೆ. ದರುಶನ ಪಡೆಯಲು ಹಲವು ಯಾತ್ರಿಗಳಿಗೆ ಟಿಕೆಟ್ ದೊರತಿಲ್ಲ ಎಂಬುದು ಇಲ್ಲಿ ಗಮನಾರ್ಹ.
Comments are closed.