ರಾಂಚಿ: ಝಾರ್ಖಂಡ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ತಮ್ಮನ್ನು ಭೆಟಿಯಾಗಲು ಬರುವವರಲ್ಲಿ ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಅದೆಂದರೆ ತನ್ನ ಭೇಟಿಯ ಸಮಯದಲ್ಲಿ ತನಗೆ ಹೂಗುಚ್ಛವನ್ನು ನೀಡುವ ಬದಲು ಉತ್ತಮ ಪುಸ್ತಕ ಒಂದನ್ನು ನೀಡುವಂತೆ ಸೊರೇನ್ ಮನವಿ ಮಾಡಿಕೊಂಡಿದ್ದಾರೆ.
‘ನೀವು ನನಗೆ ಹೂಗುಚ್ಛಗಳನ್ನು ನೀಡಿದಲ್ಲಿ, ಅವುಗಳು ಆ ಬಳಿಕ ಮೂಲೆಯಲ್ಲೆಲ್ಲೋ ಬಿದ್ದು ಆ ಬಳಿಕ ಮುದುರಿ ಹಾಳಾಗುತ್ತದೆ ಮತ್ತು ನನಗೆ ಅವುಗಳನ್ನು ಜತನದಿಂದ ಕಾಪಾಡಿಕೊಳ್ಳಲೂ ಆಗುವುದಿಲ್ಲ, ಆದರೆ ಇದಕ್ಕೆ ಬದಲಾಗಿ ನೀವು ಪುಸ್ತಕ ಒಂದನ್ನು ನೀಡಿದರೆ ಅದು ನನ್ನ ತಿಳುವಳಿಕೆಯನ್ನು ಅರಳಿಸುತ್ತದೆ’ ಎಂಬರ್ಥದ ಹಿಂದಿ ಟ್ವೀಟ್ ಅನ್ನು ಸೊರೇನ್ ಅವರು ಮಾಡಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿ ಭಾರತೀಯ ಜನತಾ ಪಕ್ಷದ ಸರಕಾರವನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ ಹೇಮಂತ್ ಸೊರೇನ್ ನಾಯಕತ್ವದ ಜೆ.ಎಂ.ಎಂ., ಕಾಂಗ್ರೆಸ್, ಆರ್.ಜೆ.ಡಿ. ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಮತ್ತು ಜೆ.ಎಂ.ಎಂ. ಪಕ್ಷದ ಹೇಮಂತ್ ಸೊರೇನ್ ಅವರು ರಾಜ್ಯದ ಏಳನೇ ಮುಖ್ಯಮಂತ್ರಿಯಾಗಿ ಡಿಸೆಂಬರ್ 29ರ ಆದಿತ್ಯವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Comments are closed.