ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಯಾರು ಎಷ್ಟೇ ಪ್ರತಿಭಟನೆ ನಡೆಸಿದರೂ, ಏನೇ ಆದರೂ ಕೇಂದ್ರ ಸರಕಾರ ತನ್ನ ಹೆಜ್ಜೆ ಹಿಂದೆ ಇಡಲ್ಲ. ಈ ನಿರ್ಧಾರದ ವಿಷಯದಲ್ಲಿ ಒಂದೇ ಒಂದು ಇಂಚು ಕೂಡ ಹಿಂದೆ ಸರಿಯಲ್ಲ ಎಂದು ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ.
ರಾಜಸ್ಥಾನದ ಜೋಧಪುರದಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಿ ಅಮಿತ್ ಶಾ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಈಗಾಗಲೇ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಇದರಲ್ಲಿ ಪಾಲ್ಗೊಂಡಿದ್ದವರಿಗೆ ಕಾಯಿದೆ ಬಗ್ಗೆ ಮಾಹಿತಿ ಇಲ್ಲ ಎನಿಸುತ್ತಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಅಮಿತ್ ಶಾ ದೂರಿದರು.
ದೇಶದ ಯಾವುದೇ ನಾಗರಿಕನ ಪೌರತ್ವವನ್ನೂ ಈ ಕಾಯಿದೆ ಕಸಿಯುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ತಪ್ಪು ಮಾಹಿತಿ ಹರುಡತ್ತಿದೆ. ಇದರಿಂದ ಜನರು ಹಾದಿ ತಪ್ಪುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ ಎಲ್ಲದ್ದಕ್ಕೂ ಕಾರಣ ಎಂದು ಅಮಿತ್ ಶಾ ವಿವರಿಸಿದರು.
Comments are closed.