ರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಕುಳಿತಲ್ಲೇ ಸುಸು ಮಾಡಿದ ಪ್ರಯಾಣಿಕ

Pinterest LinkedIn Tumblr


ನವದೆಹಲಿ: ಏರ್ ಪೋರ್ಟ್ ಟರ್ಮಿನಲ್‍ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕನೋರ್ವ ಕುಳಿತಲ್ಲೇ ಸುಸು ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ವ್ಯಕ್ತಿ ಸುಸು ಮಾಡುತ್ತಿರುವ ವಿಡಿಯೋ ಪ್ಯಾಸೆಂಜರ್ ಶೇಮಿಂಗ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಅಕೌಂಟಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಈ ವಿಡಿಯೋಗೆ ಭಾರೀ ಕಮೆಂಟ್ ಗಳು ಬರುತ್ತಿದ್ದು, ಪ್ರಯಾಣಿಕನನ್ನು ಜಾಲತಾಣಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?
ಏರ್ ಪೋರ್ಟಿನಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಪ್ರಯಾಣಿಕರ ಬೆಂಚಿನಲ್ಲಿ ಕುಳಿತುಕೊಂಡಿದ್ದಾನೆ. ಕೆಲ ಸಮಯದ ಬಳಿಕ ಈತ ಪ್ರಯಾಣಿಕರ ಎದುರೇ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಸುಸು ಮಾಡಲು ಆರಂಭಿಸಿದ್ದಾನೆ. ಇದು ಅಲ್ಲಿ ಸುತ್ತಮುತ್ತ ಇದ್ದ ಜನರಿಗೆ ಅಸಹ್ಯ ಉಂಟು ಮಾಡಿದೆ. ಅಲ್ಲದೆ ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಈ ವಿಡಿಯೋ 20 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 5 ಸಾವಿರ ಮಂದಿ ಲೈಕ್ ಮಾಡಿದ್ದು, ಪ್ರಯಾಣಿಕನ ಪರ-ವಿರೋಧ ಕಮೆಂಟ್ ಗಳು ಬರುತ್ತಿವೆ. ಅನೇಕರು ಆತನನ್ನು ಕೂಡಲೇ ಬಂಧಿಸುವಂತೆ ಏರ್‍ಪೋರ್ಟ್ ಅಧಿಕಾರಿಗಳಲ್ಲಿ ಕೇಳಿಕೊಂಡರೆ, ಮತ್ತೆ ಕೆಲವರು ನಾಚಿಕೆಯಾಗಬೇಕು ಎಂದು ಬೈದಿದ್ದಾರೆ. ಅವನು ಸುಸು ಮಾಡುತ್ತಿದ್ದರೂ ಯಾರೂ ಏನೂ ಹೇಳದೆ ಯಾಕೆ ಕುಳಿತಿದ್ದೀರಾ ಎಂದು ಓರ್ವ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ನೀವು ನಿಮ್ಮ ಕೆಲಸ ಮಾಡಿ. ಆತ ಸುಸು ಮಾಡಿ ಸ್ವಲ್ಪ ನಿರಾಳವಾಗಿದ್ದಾನೆ. ನೀವ್ಯಾಕೆ ಆತನನ್ನು ನೋಡಲು ಹೋಗಿದ್ದು ಎಂದು ಕಿಡಿಕಾರಿದ್ದಾರೆ. ಹೀಗೆ ಹಲವಾರು ಕಮೆಂಟ್ ಗಳು ಬರುತ್ತಿವೆ.

Comments are closed.