ಅಮೃತಸರ: ಪಾಕಿಸ್ತಾನದಲ್ಲಿ ಮುಸ್ಲಿಮರ ದಾಳಿಗೆ ತುತ್ತಾಗಿರುವ ನಾಂಕನ್ ಸಾಹೇಬ್ ಗುರುದ್ವಾರದಲ್ಲಿರುವ ಸಿಖ್ ಕುಟುಂಬದ ರಕ್ಷಣೆ ಮಾಡಿ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಮನವಿ ಮಾಡಿದ್ದಾರೆ.
ಮತಾಂತರ ಮತ್ತು ಹಲ್ಲೆ ಆರೋಪದ ಮೇರೆಗೆ ದಾಳಿಗೆ ತುತ್ತಾಗಿರುವ ನಾಂಕಾನ್ ಗುರುದ್ವಾರದಲ್ಲಿರುವ ಸಿಖ್ ಕುಟುಂಬದ ರಕ್ಷಣೆ ಮಾಡುವಂತೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮನವಿ ಮಾಡಿದ್ದಾರೆ. ತಕ್ಷಣವೇ ಪಾಕಿಸ್ತಾನ ಸರ್ಕಾರ ಮಧ್ಯಪ್ರವೇಶಿಸಬೇಕು. ಗುರುದ್ವಾರದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಸಿಖ್ ರ ವಿರುದ್ಧ ಕೆರಳಿದ ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಪವಿತ್ರ ಕ್ಷೇತ್ರ ದರ್ಶನಕ್ಕೆ ತೆರಳಿದ ಭಾರತೀಯರಿಗೆ ಬೆದರಿಕೆಯೊಡ್ಡಲಾಗುತ್ತಿರುವ ಬಗ್ಗೆ ವರದಿಯಾಗಿದೆ ಎಂದು ಟ್ವಿಟರ್ ನಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನ್ ನಲ್ಲಿ ಗುರುನಾನಕ್ ರ ಜನ್ಮಸ್ಥಳದ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಗ್ಜಿತ್ ಕೌರ್ ಎಂಬ ಸಿಖ್ ಯುವತಿಯನ್ನು ಮೊಹಮ್ಮದ್ ಹಸ್ಸನ್ ಎಂಬ ಯುವಕ ಅಪಹರಿಸಿದ್ದು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಯುವಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆರಳಿರುವ ಮುಸ್ಲಿಮರು ತಮ್ಮ ಧರ್ಮಕ್ಕೆ ಮತಾಂತರಗೊಂಡ ಯುವತಿಯನ್ನು ಹೇಗೆ ವಾಪಸ್ ಕರೆದುಕೊಂಡು ಹೋದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಪಂಜಾಬ್ ಜಿಲ್ಲೆ ಗುರುದ್ವಾರ್ ದ ನಾಂಕನ್ ಸಾಹೇಬ್ ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮರು ನಾಂಕನ್ ನಲ್ಲಿ ಒಬ್ಬರೇ ಒಬ್ಬ ಸಿಖ್ಖರು ಇರುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
Comments are closed.