ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಈಗ ಕಾಯಂ ಆಗಿದೆ, ಅದಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ.
ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಆರೋಪಿಗಳನ್ನು ನೇಣುಗಂಬಕ್ಕೆ ಏರಿಸಲಾಗುವುದು. ಈ ಬಗ್ಗೆ ಹೊಸದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಈಗಾಗಲೇ ತೀರ್ಪು ಕೂಡ ಪ್ರಕಟಿಸಿದೆ.
ಇಡೀ ದೇಶವೇ ಈ ತೀರ್ಪು ಸ್ವಾಗತಿಸಿದೆ. 2012ರ ಡಿಸೆಂಬರ್ 16ರಂದು ಪೈಶಾಚಿಕ ಕೃತ್ಯದಲ್ಲಿ ಮಗಳು ನಿರ್ಭಯಾಳನ್ನು ಕಳೆದುಕೊಂಡಿದ್ದ ತಾಯಿ ಆಶಾದೇವಿ ಏಳು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರು.
ಏಳು ವರ್ಷಗಳ ಕಾನೂನು ಹೋರಾಟದ ನಂತರ ಈಗ ಆಶಾದೇವಿಗೆ ಜಯ ಸಿಕ್ಕಿದೆ.
ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ ನಿರ್ಭಯಾ ತಾಯಿ ಆಶಾದೇವಿ ಬಳಿ ಬಂದ ಮುಕೇಶ್ ಸಿಂಗ್ ತಾಯಿ, ಸೆರಗೊಡ್ಡಿ ಭಿಕ್ಷೆ ಬೇಡಿದರು.
ಮೈ ಅಪ್ನೆ ಬೇಟೆ ಕಿ ಜಿಂದಗಿ ಕಿ ಭೀಕ್ ಮಾಂಗ್ತಿ ಹೂ, ಮೇರಿ ಜೋಲಿ ಮೇ ಮೇರೆ ಬೇಟೆ ಕಿ ಜಾನ್ ದೇ ದೋ (ನನ್ನ ಮಗನ ಪ್ರಾಣದ ಭಿಕ್ಷೆ ನೀಡಿ. ನನ್ನ ಮಡಿಲಿಗೆ ನನ್ನ ಮಗನ ಜೀವ ತುಂಬಿ) ಎಂದು ಬೇಡಿಕೊಂಡಿದ್ದಾರೆ.
ಇದಕ್ಕೆ ತಕ್ಕ ಉತ್ತರವನ್ನು ನಿರ್ಭಯಾ ತಾಯಿ ಆಶಾದೇವಿ ನೀಡಿದ್ದಾರೆ.
ಮೇರಿ ಬಿ ಬೇಟಿ ತಿ. ಮೈ ಕೈಸೆ ಭೂಲೂ ಉಸ್ಕೆ ಸಾಥ್ ಕ್ಯಾ ಹುವಾ. ಮೈ ದಿಸ್ ಕಾ ಇಂತೆಜಾರ್ ಸಾಥ್ ಸಾಲ್ ಸೇ ಕರ್ ರಹೀ ಹೂ (ನನಗೂ ಮಗಳು ಇದ್ದಳು. ಆಕೆಯ ಮೇಲೆ ಎಂಥ ದೌರ್ಜನ್ಯ ನಡೆದಿದೆ ಎಂಬುದನ್ನು ಹೇಗೆ ಮರೆಯಲಿ. ಈ ದಿನಕ್ಕಾಗಿ ಏಳು ವರ್ಷಗಳಿಂದಲೂ ಕಾದಿದ್ದೇನೆ) ಎಂದು ಆಶಾದೇವಿ ಸ್ಪಷ್ಟಪಡಿಸಿದ್ದಾರೆ.
ಇಬ್ಬರ ನಡುವಿನ ಸಂಭಾಷಣೆಯನ್ನು ಹಲವಾರು ಮಂದಿ ವೀಕ್ಷಿಸಿದ್ದಾರೆ.
ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಯಾಗಿರುವುದು ಸೂಕ್ತವಾಗಿದೆ. ಅದಕ್ಕಿಂತಲೂ ಘೋರ ಶಿಕ್ಷೆ ಇದ್ದಿದ್ದರೆ ಕೊಡಬೇಕಿತ್ತು ಎಂದು ಹಲವಾರು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ನಿರ್ಭಯಾ ಹಂತಕರಿಗೆ ಜನವರಿ 22ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದ್ದು, ಈಗಾಗಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
ಡಿಸೆಂಬರ್ 16, 2012ರ ರಾತ್ರಿ ಬಾಲಕ ಸೇರಿದಂತೆ ಆರು ಮಂದಿ ದಿಲ್ಲಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಆತನ ಗೆಳೆಯ ಇದ್ದ ಬಸ್‌ನಲ್ಲಿ ತೆರಳುತ್ತಿದ್ದರು. ಬಸ್‌ನಿಂದ ಯುವಕನನ್ನು ಹೊರಗೆ ದಬ್ಬಿದ ದುರುಳರು ನಿರ್ಭಯಾ ಮೇಲೆ ಅಮಾನವೀಯ, ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಎಸಗಿದರು.
Comments are closed.