ಲಕ್ನೋ: ಮದುವೆಯಾಗಿ ಹದಿನೇಳು ದಿನ ಕಳೆಯುವುದರಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಉನ್ನಾವೋದ ಬಂಥಾರಾ ನಿವಾಸಿಯಾಗಿರುವ ಮಹಿಳೆಗೆ 2019ರ ಏಪ್ರಿಲ್ 19ರಂದು ಉನ್ನಾವೋದ ಸದಾರ್ ಕೋಟ್ವಾಲಿ ಪ್ರದೇಶದ ಗ್ರಾಮದಲ್ಲಿ ವಿವಾಹವಾಗಿತ್ತು. ಮತ್ತೊಂದೆಡೆ ಮೇ 6ರಂದು ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು.
ಮದುವೆಯಾಗಿ 17 ದಿನದ ನಂತರ ಮಗುವಿಗೆ ಜನ್ಮ ನೀಡಿದ್ದನ್ನು ಕಂಡ ಅತ್ತೆ, ಮಾವ ಸೊಸೆಯನ್ನು ಪ್ರಶ್ನಿಸಿದ್ದರು. ತನ್ನ ಈ ಸ್ಥಿತಿಗೆ ತಂದೆ, ಪತಿ ಹಾಗೂ ಸೋದರ ಸಂಬಂಧಿ, ಗ್ರಾಮದ ಮಾಜಿ ಮುಂದಾಳು ಸೇರಿದಂತೆ ಹನ್ನೊಂದು ಮಂದಿ 13ನೇ ವಯಸ್ಸಿನಿಂದಲೇ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.
ಡಿಸೆಂಬರ್ 28ರಂದು ಸಂತ್ರಸ್ತೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ದೂರು ನೀಡಿದ್ದಾಳೆ. ಈ ಘಟನೆ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಎಸ್ಪಿ ಮಹಿಳಾ ಪೊಲೀಸ್ ಠಾಣಾಧಿಕಾರಿ ಸುನೀತಾ ಚೌರಾಸಿಯಾ ಅವರಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
Comments are closed.