ನವದೆಹಲಿ:ಫೆಬ್ರುವರಿ 8ರಂದು ನಡೆಯಲಿರುವ ದಿಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಮೊದಲ ಹಂತವಾಗಿ ಶುಕ್ರವಾರ 57 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ 11 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದು, ನಾಲ್ವರು ಮಹಿಳೆಯರು ಕಣಕ್ಕಿಳಿಯಲಿದ್ದಾರೆ ಎಂದು ವರದಿ ತಿಳಿಸಿದೆ.
ಬಿಜೆಪಿ ಮುಖಂಡ ಮನೋಜ್ ತಿವಾರಿ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ್ದರು. ಚುನಾವಣಾ ಕಣದಲ್ಲಿ ರೋಹಿಣಿ ಕ್ಷೇತ್ರದಿಂದ ವಿಜಯೇಂದ್ರ ಗುಪ್ತಾ, ಮೊಡೆಲ್ ಟೌನ್ ಕ್ಷೇತ್ರದಿಂದ ಕಪಿಲ್ ಮಿಶ್ರಾ, ಗ್ರೇಟರ್ ಕೈಲಾಶ್ ನಿಂದ ಶಿಖಾ ರಾಯ್, ನರೇಲಾದಿಂದ ನೀಲ್ ಕಮಲ್ ಖಾಟ್ರಿ, ಟಿಮಾರ್ಪುರ್ ನಿಂದ ಸುರೇಂದ್ರ ಸಿಂಗ್ ಬಿಟ್ಟು, ತುಘಲಕ್ ಬಾದ್ ನಿಂದ ವಿಕ್ರಮ್ ಬಿಧುರಿ, ಚಾಂದಿನಿ ಚೌಕ್ ನಿಂದ ಸುಮನ್ ಕುಮಾರ್ ಗುಪ್ತಾ, ಜನಕ್ ಪುರಿಯಿಂದ ಆಶೀಶ್ ಸೂದ್, ಪತ್ಪಾರ್ ಗಂಜ್ ನಿಂದ ರವಿ ನೇಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ಪಾರ್ ಗಂಜ್ ಕ್ಷೇತ್ರದಲ್ಲಿ ರವಿ ನೇಗಿ ಅವರು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿ ಅವರ ಎದುರು ಸ್ಪರ್ಧಿಸಲಿದ್ದಾರೆ. ಆದರೆ ಹೊಸ ದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾರು ಅಭ್ಯರ್ಥಿ ಎಂಬುದನ್ನು ಬಿಜೆಪಿ ಇನ್ನೂ ಘೋಷಿಸಿಲ್ಲ.
ದಿಲ್ಲಿ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಎಲ್ಲಾ 70 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ.
Comments are closed.