ಚಿಕಾಗೋ: ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿಯೋರ್ವರು ತನ್ನದೇ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಅಮೇರಿಕಾದ ಚಿಕಾಗೋದ ಇಲಿಯಾನ್ಸ್ ನಲ್ಲಿ ನಡೆದಿದೆ.
34ರ ಹರೆಯದ ಸುರೀಲ್ ಡಾಬಾವಾಲ ಶವವಾಗಿ ಪತ್ತೆಯಾದ ಮಹಿಳೆ.
ಸುರೀಲ ಡಾಬಾವಾಲ ಅವರು ಕಳೆದ ಡಿಸೆಂಬರ್ 30ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಜನವರಿ ಒಂದರಂದು ಶಾಂಬರ್ಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಮ್ ಗೆ ಹೋಗಿದ್ದ ಸುರೀಲ ಡಾಬಾವಾಲ ನಂತರ ತನ್ನ ಕಾರು ಚಲಾಯಿಸಿಕೊಂಡು ತೆರಳಿದ್ದರು ಎನ್ನಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಕೆ ಬಿಳಿ ಸೆಡಾನ್ ಕಾರನ್ನು ಚಿಕಾಗೋದ ಗ್ಯಾರಿಫೀಲ್ಡ್ ಪಾರ್ಕ್ ನಲ್ಲಿ ಪತ್ತೆ ಹಚ್ಚಿದ್ದರು.
ಕಾರಿನ ಡಿಕ್ಕಿ ತೆರೆದಾಗ ಅದರಲ್ಲಿ ಸುರೀಲ ಡಾಬಾವಾಲ ಶವ ಪತ್ತೆಯಾಗಿದೆ. ಹೊದಿಕೆಯಿಂದ ಸುತ್ತಿ ಸುರೀಲ ಡಾಬಾವಾಲ ಅವರ ಶವವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಲಾಗಿದೆ.
ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಸುರೀಲ ಡಾಬಾವಾಲ, ತನ್ನ ತಂದೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
Comments are closed.