ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ರೋಚಕವಾಗಿ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾದ ಮೊಹಮ್ಮದ್ ಶಮಿ, ತಮ್ಮ ಮಗಳ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿರುವ ಶಮಿ ತಮ್ಮ ಮಗಳ ಹಸೀನ್ ಚಿತ್ರವವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೊಟೋದಲ್ಲಿರುವ ಹಸೀನ್ ಹಳದಿ ಸೀರೆ ಧರಿಸಿರುವುದನ್ನು ನಾವು ಕಾಣಬಹುದು. ಅಲ್ಲದೇ ಈ ಪೊಟೋವನ್ನ ಶಿರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದು, ನಿನ್ನ ನೋಟ ತುಂಬಾ ಚೆನ್ನಾಗಿದೆ ಮಗಳೆ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಮಗಳೇ, ಆದಷ್ಟು ಬೇಗನೇ ನಿನ್ನನ್ನು ನೋಡುತ್ತೇನೆ ಎಂದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಭಾರತ 3ನೇ ಟಿ-20ಯ ಅಂತಿಮ ಓವರ್ನಲ್ಲಿ ಶಮಿ ತಮ್ಮ ಬೌಲಿಂಗ್ ಶೈಲಿಯ ಕೈಚಳಕ ತೋರಿಸಿದ್ದರು. ಕೊನೆಯ ಓವರ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಒಂಬತ್ತು ರನ್ಗಳ ಅಗತ್ಯವಿರುವಾಗ, ನ್ಯೂಜಿಲೆಂಡ್ ತಂಡಕ್ಕೆ ಶಮಿ ಅಘಾತ ನೀಡಿದ್ದರು. ಪಂದ್ಯದ ನಿರ್ಣಯಕ ಓವರ್ನ ಮೊದಲ ಎಸೆತವನ್ನ ಪುಲ್ಟಾಸ್ನ್ನ ಉಪಯೋಗಿಸಿಕೊಳ್ಳುವ ರಾಸ್ ಟೇಲರ್ ಮಿಡ್ವಿಕೆಟ್ನ ಮೇಲೆ ಶಮಿಗೆ ಸಿಕ್ಸರ್ ಬಾರಿಸ್ತಾರೆ.
ಕೊನೆಯ ಓವರ್ನ ಎರಡನೆ ಎಸೆತದಲ್ಲಿ ಶಮಿ ಕೇವಲ ರನ್ ಬಿಟ್ಟುಕೊಡ್ತಾರೆ. ಇನ್ನು ಶಮಿ ಮೂರನೇ ಎಸೆತ ಎದುರಿಸಿದ ವಿಲಿಯಮ್ಸನ್ ಆಫ್ ಸ್ಟಂಪ್ ಎಸೆತವನ್ನ ಥರ್ಡ್ ಮ್ಯಾನ್ ಫೀಲ್ಡರ್ನತ್ತ ತಳ್ಳಲೆತ್ನಿಸಿ ವಿಕೆಟ್ ಕೀಪರ್ ರಾಹುಲ್ಗೆ ಕ್ಯಾಚ್ ನೀಡಿ ಹೊರನಡೆಯುತ್ತಾರೆ.
20ನೇ ಓವರ್ನ 4ನೇ ಎಸೆತವನ್ನ ಬೌನ್ಸ್ ಎಸೆದ ಮಹಮ್ಮದ್ ಶಮಿ, ಟಿಮ್ ಸೀಫರ್ಟ್ರಿಂದ ಡಾಟ್ ಮಾಡಿಸುತ್ತಾರೆ. 5ನೇ ಎಸೆತವನ್ನ ಬೌನ್ಸ್ ಎಸೆದ ಮಹಮ್ಮದ್ ಶಮಿ, ಟಿಮ್ ಸೀಫರ್ಟ್ರಿಂದ ಬಾಲ್ ಡಾಟ್ ಮಾಡಿಸುವಲ್ಲಿ ಯಶಸ್ವಿಯಾಗ್ತಾರೆ. ಆದರೆ, ನಾನ್ ಸ್ಟ್ರೈಕ್ನಲ್ಲಿದ್ದ ರಾಸ್ ಟೇಲರ್ ಬೈಸ್ ಮೂಲಕ 1 ರನ್ ಕಲೆಹಾಕಿ ಪಂದ್ಯ ಟೈ ಮಾಡ್ತಾರೆ.
1 ರನ್.. 1 ಎಸೆತ.. ಉಭಯ ಆಟಗಾರರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳನ್ನ ಎದ್ದು ನಿಲ್ಲುವಂತೆ ಮಾಡಿದ್ದ ಎಸೆತ. ಒಂದು ರನ್ ತೆಗೆದು ತಂಡಕ್ಕೆ ಗೆಲುವಿನ ಸಿಹಿ ನೀಡುವ ಲೆಕ್ಕಚಾರದ್ದ ರಾಸ್ ಟೇಲರ್, ಶಮಿಯ ಆಫ್ಸೈಡ್ ಹೊಡೆಯಲು ಹೋಗಿ ಬೌಲ್ಡ್ ಆಗಿ ನಿರಾಸೆ ಅನುಭವಿಸ್ತಾರೆ. ಅಂತಿಮ ಎಸೆತದಲ್ಲಿ ಮ್ಯಾಜಿಕ್ ಮಾಡಿದ ಶಮಿ ಪಂದ್ಯವನ್ನ ಟೈನಲ್ಲೇ ಮುಕ್ತಾಯಗೊಳಿಸುತ್ತಾರೆ.
Comments are closed.