ರಾಷ್ಟ್ರೀಯ

ನಿರ್ಭಯಾ ಹಂತಕರ ಗಲ್ಲು ಶಿಕ್ಷೆಗೆ ಪಟಿಯಾಲ ಹೌಸ್ ಕೋರ್ಟ್ ತಡೆಯಾಜ್ಞೆ

Pinterest LinkedIn Tumblr


ನವದೆಹಲಿ: ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟಿನಿಂದ ದೋಷಿಗಳೆಂದು ಸಾಬೀತುಗೊಂಡು ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರನ್ನು ಫೆಬ್ರವರಿ 01ರಂದು ಗಲ್ಲಿಗೇರಿಸುವುದಕ್ಕೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಫೆಬ್ರವರಿ 01ಕ್ಕೆ ತಮಗೆ ಮರಣದಂಡನೆ ವಿಧಿಸಿ ಹೊರಡಿಸಿಲಾಗಿದ್ದ ಡೆತ್ ವಾರೆಂಟ್ ಗೆ ತಡೆ ನೀಡಬೇಕೆಂದು ನಿರ್ಭಯಾ ಅಪರಾಧಿಗಳು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ ಮತ್ತು ಮುಂದಿನ ದಿನಾಂಕ ನಿಗದಿಪಡಿಸುವವರೆಗೆ ಈ ನಾಲ್ವರ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ವಿನಯ್ ಕುಮಾರ್ ಶರ್ಮಾನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯವರ ಬಳಿಯಲ್ಲಿ ಪರಿಶೀಲನೆಗೆ ಬಾಕಿ ಇರುವ ಕಾರಣ ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕವನ್ನು ಮುಂದೂಡಬೇಕೆಂದು ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಪರ ವಕೀಲರಾದ ಎ.ಪಿ. ಸಿಂಗ್ ಅವರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.

ನಾಲ್ವರಲ್ಲಿ ಓರ್ವ ಅಪರಾಧಿಯ ಕ್ಷಮಾದಾನ ಅರ್ಜಿ ವಿಲೇವಾರಿಗೆ ಬಾಕಿ ಇರುವುದರಿಂದ ಉಳಿದ ಮೂವರನ್ನು ನಾಳೆ ಗಲ್ಲಿಗೇರಿಸಬಹುದೆಂದು ಅಪರಾಧಿಗಳ ಮನವಿ ಅರ್ಜಿಗೆ ತಿಹಾರ್ ಅಧಿಕಾರಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಪರಾಧಿಗಳ ಪರ ವಕೀಲರು, ಒಬ್ಬ ಅಪರಾಧಿಯ ಅರ್ಜಿಯ ವಿಚಾರಣೆ ಬಾಕಿ ಇರುತ್ತಾ ಉಳಿದ ಮೂವರನ್ನು ಗಲ್ಲಿಗೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

Comments are closed.