ಜಮ್ಮು: ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಜಮ್ಮು ಸಮೀಪ ಶುಕ್ರವಾರ ಮುಂಜಾನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇಂದು ಮುಂಜಾನೆ 5.45ರ ಹೊತ್ತಿಗೆ ಪೊಲೀಸ್ ತಂಡ ಜಮ್ಮು-ಶ್ರೀನಗರ್ ರಾಷ್ಟ್ರೀಯ ಹೆದ್ದಾರಿಯ ನಗ್ರೋಟಾ ಟೋಲ್ ಪೋಸ್ಟ್ ಬಳಿ ಲಾರಿಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶ್ರೀನಗರ್ ನಿಂದ ಬಂದ ಲಾರಿಯನ್ನು ತಡೆದು ತಪಾಸಣೆ ನಡೆಸಲು ಮುಂದಾದಾಗ ಲಾರಿಯೊಳಗೆ ಅಡಗಿದ್ದ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ನಂತರ ಪೊಲೀಸರ ಪ್ರತಿದಾಳಿಗೆ ಉಗ್ರನೊಬ್ಬ ಸಾವನ್ನಪ್ಪಿದ್ದ, ಉಳಿದ ಇಬ್ಬರು ಉಗ್ರರು ದಟ್ಟ ಅರಣ್ಯ ಪ್ರದೇಶದೊಳಕ್ಕೆ ಪರಾರಿಯಾಗಿದ್ದರು. ನಂತರ ಭದ್ರತಾ ಪಡೆ ಹಾಗೂ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಉಳಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ವರದಿ ವಿವರಿಸಿದೆ.
Comments are closed.