ಬಿಎಸ್ಸೆನ್ನೆಲ್‌ನ 90 ಸಾವಿರ ಸಿಬ್ಬಂದಿ ಜ. 31ಕ್ಕೆ ಸ್ವಯಂ ನಿವೃತ್ತಿ (ವಿಆರ್‌ಎಸ್) ಆಗಲಿದ್ದಾರೆ. ಕರ್ನಾಟಕದಲ್ಲೂ 6,800 ಉದ್ಯೋಗಿಗಳು ವಿಆರ್‌ಎಸ್ ಆಯ್ಕೆ ಮಾಡಿದ್ದು, ಕಂಪನಿಗೆ ವಿದಾಯ ಹೇಳಲಿದ್ದಾರೆ.
ದೇಶವ್ಯಾಪಿ 1.75 ಲಕ್ಷ ಉದ್ಯೋಗಿಗಳ ಪೈಕಿ 90 ಸಾವಿರ ಸಿಬ್ಬಂದಿ, ಕರ್ನಾಟಕದಲ್ಲಿ11,500 ಸಿಬ್ಬಂದಿ ಪೈಕಿ 6800 ಹಾಗೂ ವಿಜಯಪುರ ಟೆಲಿಕಾಂ ಜಿಲ್ಲೆಯ 410ರ ಪೈಕಿ 285 ಉದ್ಯೋಗಿಗಳು ಜ. 31ರಂದು ನಿವೃತ್ತಿಯಾಗುತ್ತಿದ್ದಾರೆ.
ರಾಜ್ಯದಲ್ಲಿ 20 ಜಿಎಂ ಹುದ್ದೆಗಳಿದ್ದವು. ಆದರೆ ಬಹುತೇಕರು ವಿಆರ್‌ಎಸ್ ತೆಗೆದುಕೊಳ್ಳುತ್ತಿರುವುದರಿಂದ ಕೇವಲ 5 ಜಿಎಂ ಹುದ್ದೆಗಳಷ್ಟೇ ಉಳಿಯಲಿವೆ. ಬಾಕಿ ಕಚೇರಿಗಳನ್ನು ವಿಭಾಗೀಯ ಮಟ್ಟದಲ್ಲಿ ವಿಲೀನ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ವಿಆರ್‌ಎಸ್ ಪಡೆದ ಸಿಬ್ಬಂದಿ.
ಶೇ. 50ರಷ್ಟು ಎಕ್ಸ್‌ಗ್ರೇಶಿಯಾ
ವಿಆರ್‌ಎಸ್ ತೆಗೆದುಕೊಳ್ಳುವ ನೌಕರರಿಗೆ ಕೇಂದ್ರ ಸರಕಾರ ಮಾರ್ಚ್ 2020ಕ್ಕೆ ಶೇ. 50ರಷ್ಟು ಎಕ್ಸ್‌ಗ್ರೇಶಿಯಾ ಹಾಗೂ ಬಾಕಿ ಶೇ. 50ರಷ್ಟು ಹಣವನ್ನು ಜೂನ್ 2020ರಲ್ಲಿನೀಡಲಿದೆ. ವಿಆರ್‌ಎಸ್ ತೆಗೆದುಕೊಳ್ಳುವ ಸಿಬ್ಬಂದಿಗೆ 60 ವರ್ಷ ಪೂರ್ಣಗೊಂಡ ಬಳಿ ಗ್ರ್ಯಾಚುಟಿ ಮತ್ತಿತರೆ ಸೌಲಭ್ಯ ನೀಡಲಿದೆ. ದೂರಸಂಪರ್ಕ ಇಲಾಖೆಯ ಅಡಿಯಲ್ಲಿದ್ದ ಸಂಸ್ಥೆ 2000ನೇ ಇಸವಿಯಲ್ಲಿ ಭಾರತ ಸಂಚಾರ ನಿಗಮವಾಗಿ ಮಾರ್ಪಟಿತ್ತು.
ಬಿಎಸ್ಸೆನ್ನೆಲ್‌ಗೆ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿಅಕ್ಷರಶಃ ಸಂತ್ರಸ್ತರಾದ ಭಾವ ಕಾಡುತ್ತಿದೆ. 90 ಸಾವಿರ ಕಾರ್ಯನಿರತ ಸಿಬ್ಬಂದಿ ವಿಆರ್‌ಎಸ್ ಸ್ವೀಕರಿಸುತ್ತಿರುವುದು ದಾಖಲೆಯಾಗಲಿದೆ ಎಂದು ಬಿಎಸ್ಸೆನ್ನೆಲ್ ಸ್ಟಾಫ್ ಆ್ಯಂಡ್ ಯೂನಿಯನ್ ಹೊಸದಿಲ್ಲಿಯ ಸಹಾಯಕ ಪ್ರ. ಕಾರ್ಯದರ್ಶಿ ಜಿ.ಬಿ. ಸಾಲಕ್ಕಿ ಹೇಳಿದ್ದಾರೆ.
Comments are closed.