ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಉಲ್ಲೇಖಿಸಿ ಅದರ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ , ಹೊಸ ತೆರಿಗೆ ಕ್ರಮವು ಸಾರಿಗೆ ಮತ್ತು ಜಾರಿ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ ಎಂದು ಹೇಳಿದ್ದಾರೆ.”ಜಿಎಸ್ಟಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ. ಇನ್ಸ್ ಪೆಕ್ಟರ್ ರಾಜ್ ಕಣ್ಮರೆಯಾಗಿದೆ. ಇದು ಎಂಎಸ್ಎಂಇಗೆ ಉಪಯೋಗವಾಗಿ ಕಾಣುತ್ತಿದೆ.ಜಿಎಸ್ಟಿ ಯಿಂದ ಗ್ರಾಹಕರು ವಾರ್ಷಿಕ 1 ಲಕ್ಷ ಕೋಟಿ ರೂ. ಲಾಭ ಪಡೆದಿದ್ದಾರೆ” ಎಂದು ಸೀತಾರಾಮನ್ ಹೇಳಿದ್ದಾರೆ.
ಶನಿವಾರ ಸಚಿವರು ಕೇಂದ್ರ ಬಜೆಟ್ 2020-21ರ ಮಂಡನೆ ಮಾಡಿದ್ದಾರೆ.
2020-21ರ ಬಜೆಟ್ ಜನರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದ ಸಚಿವೆ “ನಮ್ಮ ಜನರು ಲಾಭದಾಯಕವಾಗಿ ಉದ್ಯೋಗ ಪಡೆಯಬೇಕು. ನಮ್ಮ ವ್ಯವಹಾರಗಳು ಆರೋಗ್ಯಕರವಾಗಿರಬೇಕು, ಎಲ್ಲಾ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ಈ ಬಜೆಟ್ ಅವರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿದೆ. ಹೊಸ ಚೈತನ್ಯದೊಂದಿಗೆ, ಪ್ರಧಾನ ಮಂತ್ರಿಯ ನಾಯಕತ್ವದಲ್ಲಿ, ಭಾರತದ ಜನನಮ್ಮ ಆರ್ಥಿಕ ನೀತಿಯಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ” ಎಂದು ಅವರು ಹೇಳಿದರು
ಈ ವರ್ಷದ ಜನವರಿ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವನ್ನು 1,10,828 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಅದರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 20,944 ಕೋಟಿ ರೂ., ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 28,224 ಕೋಟಿ ರೂ ಇದೆ. ಆಮದಿನ ಮೇಲೆ ಸಂಗ್ರಹಿಸಿದ ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ) 23,481 ಕೋಟಿ ರೂ. ಸೇರಿದಂತೆ 53,013 ಕೋಟಿ ರೂ., ಮತ್ತು ಸೆಸ್ 8,637 ಕೋಟಿ ರೂ. ಸಂಗ್ರಹವಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ, ಹೊಸ ತೆರಿಗೆ ಆಡಳಿತದ ಅನುಷ್ಠಾನದ ನಂತರ ಜನವರಿ 2020 ರ ಜಿಎಸ್‌ಟಿ ಆದಾಯ ಸಂಗ್ರಹವು 2020 ರ ಜನವರಿ ವರೆಗೆ ಸಂಗ್ರಹವಾಗಿರುವ ಎರಡನೇ ಅತಿ ಹೆಚ್ಚು ಮಾಸಿಕ ಸಂಗ್ರಹವಾಗಿದೆಡಿಸೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ 3 ಬಿ ರಿಟರ್ನ್ಸ್ ಸಂಖ್ಯೆ 83 ಲಕ್ಷ ಎಂದು ಅವರು ಹೇಳಿದ್ದಾರೆ.ದೇಶೀಯ ವಹಿವಾಟಿನಿಂದ 2020 ರ ಜನವರಿಯಲ್ಲಿ ಜಿಎಸ್‌ಟಿ ಆದಾಯವು 2019 ರ ಜನವರಿಯಲ್ಲಿನ ಆದಾಯಕ್ಕಿಂತ ಶೇಕಡಾ 12 ರಷ್ಟು ಅದ್ಭುತ ಬೆಳವಣಿಗೆಯನ್ನು ತೋರಿಸಿದೆ. ಸರಕುಗಳ ಆಮದುಗಳಿಂದ ಸಂಗ್ರಹಿಸಿದ ಐಜಿಎಸ್‌ಟಿಯನ್ನು ಗಣನೆಗೆ ತೆಗೆದುಕೊಂಡು, ನೋಡಿದರೆ ಕಳೆದ ವರ್ಷಕ್ಕಿಂತ ಜನವರಿ 2020 ರ ಅವಧಿಯಲ್ಲಿ ಒಟ್ಟು ಆದಾಯವು ಶೇಕಡಾ 8 ರಷ್ಟು ಹೆಚ್ಚಾಗಿದೆ ಜಿಎಸ್‌ಟಿ ಜಾರಿಗೆ ಬಂದ ನಂತರದ ಎರಡನೇ ಬಾರಿಗೆ ಮಾಸಿಕ ಆದಾಯವು 1.1 ಲಕ್ಷ ಕೋಟಿ ರೂ.ತಲುಪಿದೆ.
Comments are closed.