ನಾಗಪುರ: ತನ್ನ ವಿದ್ಯಾರ್ಥಿಯ ಮನೆಯಿಂದ ಚಿನ್ನದ ಆಭರಣಗಳನ್ನು ಕದ್ದ ಆರೋಪದ ಮೇಲೆ ಸ್ಥಳೀಯ ಪೊಲೀಸರು 36ರ ಹರೆಯದ ಖಾಸಗಿ ಟ್ಯೂಶನ್ ಟೀಚರ್ ಮತ್ತು ಆಕೆಯ ಸ್ನೇಹಿತೆಯನ್ನು ಬಂಧಿಸಿದ್ದಾರೆ. ಪೊಲೀಸರು ಅವರ ಬಳಿಯಿಂದ ಕದ್ದ ಆಭರಣ ಮತ್ತು ಒಟ್ಟು 1.50 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಫೆ. 4 ರಂದು ಓಲ್ಡ್ ಸುಬೇದಾರ್ ಲೇಔಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹುಡೆRàಶ್ವರ್ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಶಿಕ್ಷಕಿ ವಿದ್ಯಾರ್ಥಿಯ ತಾಯಿಯ ಗಮನವನ್ನು ಬೇರೆಡೆಗೆ ತಿರುಗಿಸುವ ಮೂಲಕ ವಿದ್ಯಾರ್ಥಿಯ ಮಲಗುವ ಕೋಣೆಯಿಂದ ಆಭರಣಗಳನ್ನು ಕದ್ದರೆ, ಆಕೆಯ ಸ್ನೇಹಿತೆ ನಿಗಾ ಇಡುವ ಮೂಲಕ ಸಹಕರಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 380 (ವಾಸದ ಮನೆಯಲ್ಲಿ ಕಳ್ಳತನ, ಇತ್ಯಾದಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.
Comments are closed.