ಲಕ್ನೋ: ಗರ್ಭಿಣಿಯಾದರೆ ಸೌಂದರ್ಯ ಹಾಳಾಗುತ್ತೆ ಎಂದು ಪತಿಯೊಬ್ಬ ತನ್ನ ಪತ್ನಿಯನ್ನು ತಾಯಿ ಆಗಲು ಬಿಡದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ತಾಯಿ ಆಗಲು ಬಿಡದ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ, ನನ್ನ ಪತಿ ನನಗೆ ತಾಯಿಯಾಗಲು ಬಿಡುತ್ತಿಲ್ಲ. ನೀನು ತಾಯಿ ಆದರೆ ನಿನ್ನ ಸೌಂದರ್ಯ ಹಾಳಾಗುತ್ತೆ. ಆಗ ನಾನು ನಿನ್ನ ಜೊತೆ ಹೇಗೆ ಬದುಕಲಿ ಎಂದು ಹೇಳುತ್ತಾನೆ ಅಂತಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದರ ಜೊತೆಗೆ ನನ್ನ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
5 ವರ್ಷದಲ್ಲಿ ನಾನು ನಾಲ್ಕು ಬಾರಿ ಗರ್ಭಿಣಿ ಆಗಿದ್ದೆ. ಆದರೆ ನನ್ನ ಪತಿ ಗರ್ಭಪಾತ ಮಾಡಿಸಿದ್ದನು. ನೀನು ತಾಯಿ ಆದರೆ ನಿನ್ನ ಸೌಂದರ್ಯ ಕೊನೆಗೊಳ್ಳುತ್ತದೆ. ನಂತರ ನಾನು ನಿನ್ನ ಜೊತೆ ಹೇಗೆ ಬದುಕಲು ಸಾಧ್ಯ ಎಂದು ನನ್ನ ಪತಿ ಹೇಳುತ್ತಾನೆ ಎಂದು ಮಹಿಳೆ ತಿಳಿಸಿದ್ದಾಳೆ. ಈ ಬಗ್ಗೆ ಮಹಿಳೆ ಎಸ್‍ಎಸ್‍ಪಿ ಕಚೇರಿಯಲ್ಲಿ ದೂರು ನೀಡಿದ್ದು, ಇದೀಗ ಈ ಪ್ರಕರಣವನ್ನು ಕವಿನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
2015ರಲ್ಲಿ ಕುಟುಂಬಸ್ಥರ ಒಪ್ಪಿಗೆ ಪಡೆದು ನಾವಿಬ್ಬರು ಅಂತರ್ಜಾತಿ ವಿವಾಹವಾಗಿದ್ದೇವು. ಈ ವೇಳೆ ನನ್ನ ಪತಿ ಮನೆ ಅಳಿಯನಾಗಿರುತ್ತೇನೆ ಎಂದು ಹೇಳಿದ್ದನು. ಕುಟುಂಬವನ್ನು ಒಟ್ಟಿಗೆ ಇಡಲು ನನ್ನ ತವರು ಮನೆಯವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇದಾದ ಬಳಿಕ ನಾನು ನನ್ನ ಪತಿಯ ಜೊತೆ ಕವಿನಗರದ ಕಾಲೋನಿಯೊಂದರಲ್ಲಿ ವಾಸಿಸುತ್ತಿದೆ. ಪತಿ ನನ್ನ ತಂದೆಯ ಬಳಿ ಬಿಲ್ಡರ್ ಕೆಲಸಕ್ಕಾಗಿ ಹಣ ಕೇಳಿದ್ದನು. ಆದರೆ ನನ್ನ ತಂದೆ ಕೊಡಲು ಒಪ್ಪಲಿಲ್ಲ. ಆಗ ನನ್ನ ಪತಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ತಿಳಿಸಿದ್ದಾಳೆ.
Comments are closed.