ರಾಷ್ಟ್ರೀಯ

ಕೋವಿಡ್ 19 ಸೋಂಕಿಗೆ ನಾಲ್ಕನೇ ಬಲಿ

Pinterest LinkedIn Tumblr


ಹೊಸದಿಲ್ಲಿ: ಮಾರಣಾಂತಿಕ ಕೋವಿಡ್ 19 ಸೋಂಕಿಗೆ ದೇಶದಲ್ಲಿ ನಾಲ್ಕನೇ ಬಲಿಯಾಗಿದೆ. ಪಂಜಾಬ್ ನಲ್ಲಿ ಸೋಂಕಿಗೆ ಒಳಗಾಗಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಪಂಜಾಬ್ ನ 70 ವರ್ಷದ ವ್ಯಕ್ತಿಯೋರ್ವ ಕೋವಿಡ್ 19 ವೈರಸ್ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರ ಎಂದು ವರದಿಯಾಗಿದೆ.

ಇದರೊಂದಿಗೆ ಭಾರತದಲ್ಲಿ ಕೋವಿಡ್ 19 ಸೋಂಕಿನ ಕಾರಣದಿಂದ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.

ಭಾರತದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ ಇಂದು 166ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಈ ಮಾರಕ ವೈರಸ್ ಪೀಡಿತರ ಸಂಖ್ಯೆ 2 ಲಕ್ಷಕ್ಕರಿದ್ದು 8 ಸಾವಿರ ಜನರನ್ನು ಈಗಾಗಲೇ ಬಲಿಪಡೆದುಕೊಂಡಿದೆ.

Comments are closed.