ರಾಷ್ಟ್ರೀಯ

ನಾಳೆ ನಡೆಯಲಿರುವ ಜನತಾ ಕರ್ಫ್ಯೂಗೆ 1,300 ಪ್ಯಾಸೆಂಜರ್, ಮೇಲ್, ಎಕ್ಸ್’ಪ್ರೆಸ್ ರೈಲು ಬಂದ್

Pinterest LinkedIn Tumblr

ನವದೆಹಲಿ: ಮನುಷ್ಯನ ಜೀವವನ್ನೇ ಕಸಿದುಕೊಳ್ಳುತ್ತಿರುವ ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್. 22 ರಂದು ಜನತಾ ಬಂದ್’ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಕೂಡ ಇದಕ್ಕೆ ಬೆಂಬಲ ನೀಡಿದೆ.

ಭಾನುವಾರ ದೇಶದಾದ್ಯಂತ ಯಾವುದೇ ಪ್ಯಾಸೆಂಜರ್, ಮೇಲ್, ಎಕ್ಸ್’ಪ್ರೆಸ್ ರೈಲುಗಳ ಸಂಚಾರ ನಡೆಸದೇ ಇರಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಶನಿವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಭಾನಾವಾರ ರಾತ್ರಿ 10 ಗಂಟೆಯವರೆಗೆ ದೇಶದ ಯಾವುದೇ ನಿಲ್ದಾಣಗಳಿಂದ ಪ್ಯಾಸೆಂಜರ್ ರೈಲು ಹೊರಡುವುದಿಲ್ಲ. ಭಾನುವಾರ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10ರವರೆಗೆ ಮೇಲ್, ಎಕ್ಸ್ ಪ್ರೆಸ್ ರೈಲು ಸಂಚಾರ ಇರದು. ಇದೇ ವೇಳೆ. ಮಾ.22ರಿಂದ ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಲ್ಲಾ ರೀತಿಯ ಆಹಾರ ಪೂರೈಕೆ ಬಂದ್’ಗೆ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಆದರೆ, ನಿರ್ಧಾರ ಕೈಗೊಂಡ ಅವಧಿಕೂ ಮುನ್ನ ಭಾನುವಾರ ಬೆಳಿಗ್ಗೆಯೇ ಹೊರಡುವ ರೈಲುಗಳ ಸಂಚಾರ ಗುರಿ ಮುಟ್ಟುವವರೆಗೂ ಸಂಚಾರ ಮುಂದುವರೆಸಲಿವೆ ಎಂದು ಇಲಾಖೆ ತಿಳಿಸಿದೆ.

Comments are closed.