ನವದೆಹಲಿ: ದೇಶದಲ್ಲಿ ಕೋವಿಡ್-19 ಆತಂಕ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ 26 ಸೋಂಕಿತರ ಹೊಸ ಪ್ರಕರಣಗಳು ವರದಿಯಾಗಿದೆ. ಆ ಮೂಲಕ ಒಟ್ಟಾರೆ ಸೊಂಕು ಪೀಡಿತರ ಸಂಖ್ಯೆ 341 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಭಾನುವಾರ ಭಾರತದಲ್ಲಿ ಕೋವಿಡ್ 18 ನಿಂದ ಮೃತರಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬಿಹಾರದ 38 ವರ್ಷದ ವ್ಯಕ್ತಿಯೊಬ್ಬರು ಇಂದು ಕಿಡ್ನಿ ವೈಫಲ್ಯವಾಗಿ ಮೃತರಾಗಿದ್ದರು. ಇವರಿಗೂ ಕೂಡ ಸೋಂಕು ತಗುಲಿತ್ತು.
ಮುಂಬೈನಲ್ಲಿ ಕೂಡ 63 ವರ್ಷದ ವ್ಯಕ್ತಿಯೊಬ್ಬರು ಕೂಡ ಈ ಸೋಂಕಿನಿಂದಾಗಿ ಮೃತರಾಗಿದ್ದಾರೆ. ಈಗಾಗಲೇ 16,999 ವ್ಯಕ್ತಿಗಳಿಗೆ ಕೋವಿಡ್ 19 ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 341 ಜನರಲ್ಲಿ ವೈರಾಣು ಇರುವುದು ದರಢಪಟ್ಟಿದೆ.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ವೈರಸ್ ಭಾರತದಲ್ಲೂ ಕಳವಳಕ್ಕೆ ಕಾರಣವಾಗಿರುವಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಸಂಚರಿಸುವ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ಭಾರತೀಯ ರೈಲ್ವೇ ಇಲಾಖೆ ಇಂದು ಆದೇಶ ಹೊರಡಿಸಿದೆ. ಆದರೆ ಸರಕು ಸಾಗಣೆ ರೈಲಿನ ಓಡಾಟ ಯಥಾಸ್ಥಿತಿಯಲ್ಲಿರಲಿದೆ.
Comments are closed.