ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸ್ವಯಂ ನಿರ್ಬಂಧಿತ ಕ್ರಮವಾದ ಜನತಾ ಕರ್ಫ್ಯೂವನ್ನು ದೇಶದೆಲ್ಲೆಡೆ ಅನುಸರಿಸಲಾಯಿತು.
14 ಗಂಟೆಗಳ ಜನತಾ ಕರ್ಫ್ಯೂ ಭಾರತದ 300 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದ ಕೊರೋವೈರಸ್ ಕಾಯಿಲೆ ಕೋವಿಡ್ -19 ವಿರುದ್ಧ ಹೋರಾಡುವ ದೇಶದ ಇತ್ತೀಚಿನ ಕ್ರಮವಾಗಿದೆ. ಈ ವೈರಸ್ 150 ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ ಮತ್ತು 300,000 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಪ್ರಮುಖವಾಗಿ ಇಟಲಿ ಮತ್ತು ಇರಾನ್‌ನಲ್ಲಿ ಕೋವಿಡ್ -19 ಹೆಚ್ಚು ಪರಿಣಾಮ ಬೀರಿದೆ.
ಈಗ ದೆಹಲಿ ಸರ್ಕಾರ ಬಂದ್ ನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಸಿಎಂ ಕೇಜ್ರಿವಾಲ್ ಮಾತನಾಡಿ ಮಾರ್ಚ್ 31 ರವರೆಗೆ ರಾಷ್ಟ್ರ ರಾಜಧಾನಿ ಲಾಕ್ ಡೌನ್ ಆಗಿರುತ್ತದೆ ಎಂದು ಹೇಳಿದರು.ಎಲ್ಲಾ ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ ,ಆದರೆ ಕಾಯಂ ಮತ್ತು ಕಾಂಟ್ರಾಕ್ಟ್ ನೌಕರರು ಕರ್ತವ್ಯದಲ್ಲಿರುತ್ತಾರೆ ಎಂದು ಹೇಳಿದರು.
ಕರೋನವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಂದು ರಾತ್ರಿ 9 ಗಂಟೆಯಿಂದ ಮಾರ್ಚ್ 31 ರವರೆಗೆ ಗುರುಗ್ರಾಮ್, ಫರಿದಾಬಾದ್, ಸೋನಿಪತ್, ಪಾಣಿಪತ್, ರೋಹ್ಟಕ್, ಪಂಚಕುಲದಲ್ಲಿ ನಿರ್ಭಂಧ ವಿಧಿಸಲಾಗಿದೆ. ಇನ್ನೊಂದೆಡೆಗೆ ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಪ್ರದೇಶಗಳನ್ನು ಸೋಮವಾರ ಸಂಜೆ 5 ರಿಂದ ಮಾರ್ಚ್ 27 ರವರೆಗೆ ಬೀಗ ಹಾಕಲಾಗುವುದು ಎಂದು ರಾಜ್ಯ ಸರ್ಕಾರ ಭಾನುವಾರ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ.
Comments are closed.