ರಾಷ್ಟ್ರೀಯ

ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆ ಲಾಕ್‌ಡೌನ್ ಎಂದರೇನು?

Pinterest LinkedIn Tumblr


ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ದೇಶದ ಒಟಟು 75 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ 75 ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೈನಂದಿನ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ದೇಶದ ಒಟ್ಟು 75 ಜಿಲ್ಲೆಗಳಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಾರಿಗೆ ವ್ಯವಸ್ಥೆಯೂ ಸೇರಿದಂತೆ ದೈನಂದಿನ ಎಲ್ಲಾ ಸಾಮಾನಯ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

ಆದರೆ ಕೇಂದ್ರ ಸರ್ಕಾರ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸುತ್ತಿದ್ದಂತೇ, ಲಾಕ್‌ಡೌನ್ ಎಂದರೇನು? ಎಂಬ ಪ್ರಶ್ನೆ ಮುನ್ನಲೆಗೆ ಬಂದಿದ್ದು, ಈ ಸ್ಥಿತಿಯಲ್ಲಿ ಏನಾಗಲಿದೆ ಎಂದು ಜನ ಕೇಳತೊಡಗಿದ್ದಾರೆ.

ಲಾಕ್‌ಡೌನ್ ಎಂದರೇನು?:

ಲಾಕ್‌ಡೌನ್‌ಗೂ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಲಾಕ್‌ಡೌನ್ ಅಂದಾಕ್ಷಣ ಇಡೀ ಊರು ಸ್ತಬ್ಧಗೊಳ್ಳಲಿದೆ ಎಂದು ಭಾವಿಸಬೇಕಿಲ್ಲ. ಅಗತ್ಯ ಸೇವೆಗಳನ್ನು ಹೊರತಡುಪಡಿಸಿ ಉಳಿದೆಲ್ಲಾ ದೈನಂದಿನ ಸಾಮಾನ್ಯ ಸೇವೆಗಳು ಮಾತ್ರ ಲಭ್ಯವಿರುವುದಿಲ್ಲ.

ಆಸ್ಪತ್ರೆ, ಔಷಧ ಅಂಗಡಿಗಳು, ಹಾಲು, ದಿನಸಿ, ಹಣ್ಣು ಮತ್ತು ತರಕಾರಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಜನಸಾಮಾನ್ಯರಿಗೆ ಲಭ್ಯವಿರುತ್ತವೆ. ಈ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಆಪತ್ಕಾಲದ ತುರ್ತು ಸೇವೆಗಳು ಲಭ್ಯವಿರುತ್ತವೆ.

ಸಾರಿಗೆ:

ಲಾಕ್‌ಡೌನ್ಘೋಷಿಸಿದ ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದಾಗಲಿದೆ. ಸಾರಿಗೆ ಸಂಸ್ಥೆ ಬಸ್, ರೈಲು, ಮೆಟ್ರೋ, ಆಟೋ ಹಾಗೂ ಕ್ಯಾಬ್ ಸೇವೆಗಳು ಸ್ಥಗಿತಗೊಳ್ಳಲಿವೆ.

ಹೊಟೇಲ್:

ಹೊಟೇಲ್ ಸೇವೆಗಳೂ ಸಂಪುರ್ಣವಾಗಿ ಬಂದ್ ಆಗಿಲಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿರುವ ಜಿಲ್ಲೆಗಳಲ್ಲಿ ಹೊಟೇಲ್ ಸೇವೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದಿಷ್ಟೇ ಅಲ್ಲದೇ ಪ್ತತಿಭಟನೆ, ಮೆರವಣಿಗೆ, ಸಭೆ-ಸಮಾರಂಭಗಳು, ಸಾರ್ವಜನಿಕವಾಗಿ ಗುಂಪು ಸೇರುವಿಕೆ ಹಾಗೂ ಕ್ರೀಡಾ ಆಯೋಜನೆ ಮೇಲೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿದೆ.

ಇನ್ನು ಲಾಕ್‌ಡೌನ್ ಆಗಿರುವುದರಿಂದ ಜನಸಾಮಾನ್ಯರಿಗೆ ಕೆಲವು ತೊಂದರೆಗಳಾಗುತ್ತವೆ ಎಂಬುದು ನಿಜವಾದರೂ, ಮಾರಕ ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ಈ ಕ್ರಮ ಅನಿವಾರ್ಯ ಎಂಬುದನ್ನೂ ನಾವೆಲ್ಲರೂ ಮನಗಾಣಬೇಕಿದೆ.

ಒಟ್ಟಿನಲ್ಲಿ ಲಾಕ್‌ಡೌನ್ ಆದ ನಗರಗಳು ಹಾಗೂ ಜಿಲ್ಲೆಗಳಲ್ಲಿ ದೈನಂದಿನ ವ್ಯವಹಾರಗಳು ಮಾತ್ರ ಸ್ಥಗಿತಗೊಳ್ಳಲಿವೆಯೇ ಹೊರತು ಯಾವುದೇ ಅಗತ್ಯ ಸೇವೆಗಳು ಬಂದ್ ಆಗುವಿದಲ್ಲ ಎಂಬುದು ನಿಚ್ಚಳ.

Comments are closed.