ನವದೆಹಲಿ: ಕರೋನಾ ವೈರಸ್ ಹರಡುವಿಕರೆ ತಡೆಯುವುದಕ್ಕಾಗಿ ಘೋಷಿಸಿರು ಸಂಪೂರ್ಣ ಸ್ತಬ್ಧ (ಲಾಕ್ ಡೌನ್) ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದ ಜನರಿಗೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಯಮ ಮತ್ತು ಕಾನೂನುಗಳನ್ನು ಜಾರಿಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸೋಮವಾರ ಕರೆ ನೀಡಿದ್ದಾರೆ.
ಅನೇಕ ಜನರು ಇನ್ನೂ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಯವಿಟ್ಟು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಿಮ್ಮನ್ನು ಉಳಿಸಿ, ನಿಮ್ಮ ಕುಟುಂಬವನ್ನು ಉಳಿಸಿ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸರಿಸುವಂತೆ ರಾಜ್ಯ ಸರ್ಕಾರಗಳಿಗೆ ಅವರು ಮನವಿ ಮಾಡಿದ್ದಾರೆ.
ಕರೋನವೈರಸ್ ಸೋಂಕು ತಡೆಗೆ ಭಾರತ ಹೋರಾಡುತ್ತಿರುವ ನಡುವೆಯೇ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ 75 ನಗರಗಲ್ಲಿ ಮಾರ್ಚ್ 31 ರವರೆಗೆ ಲಾಕ್‍ಡೌನ್ ಮುಂದುವರೆದಿದೆ.
ಏರ್ ಇಂಡಿಯಾ ಸಿಬ್ಬಂದಿಯನ್ನು ಅಭಿನಂದಿಸಿ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್ ಸಿಂಗ್ ಪುರಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,’ತುಂಬಾ ಧೈರ್ಯವನ್ನು ಮೆರೆದಿರುವ ಏರ್ ಇಂಡಿಯಾ ಸಿಬ್ಬಂದಿ ಮಾನವೀಯತೆಯ ಕರೆಗೆ ಸ್ಪಂದಿಸಿದ್ದಾರೆ. ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳಿಗೆ ಭಾರತದಾದ್ಯಂತ ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.’ ಎಂದು ಹೇಳಿದ್ದಾರೆ.
ಪರಿಸ್ಥಿತಿ ಮತ್ತು ಸಂದರ್ಭಗಳು ತುಂಬಾ ಗಂಭೀರಸ್ಥಿತಿಗೆ ಹೋಗುತ್ತಿರುವಾಗ, ಕ್ಯಾಪ್ಟನ್ ಸ್ವಾತಿ ರಾವಲ್ ಮತ್ತು ಕ್ಯಾಪ್ಟನ್ ರಾಜಾ ಚೌಹಾನ್ ನೇತೃತ್ವದ ಏರ್ ಇಂಡಿಯಾ ಬೋಯಿಂಗ್ 777 ವಿಮಾನದ ಸಿಬ್ಬಂದಿ ಕರ್ತವ್ಯದ ಕರೆಗೆ ಸ್ಪಂದಿಸಿ ಇಟಲಿಯ ರೋಮ್‍ನಲ್ಲಿ ಸಿಲುಕಿದ್ದ ಹೆಚ್ಚಿನ ವಿದ್ಯಾರ್ಥಿಗಳು ಸೇರಿದಂತೆ 263 ಭಾರತೀಯರನ್ನು ಸ್ಥಳಾಂತರಿಸುವುದರ ಮೂಲಕ ತಮ್ಮ ಕರ್ತ್ಯವ್ಯದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹರ್ ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದರು.
ರೈಲುಗಳು, ಮೆಟ್ರೋ ರೈಲುಗಳು ಮತ್ತು ಅಂತರರಾಜ್ಯ ಬಸ್ಸುಗಳ ಸೇವೆಯನ್ನು ಇಂದಿನಿಂದ ಬಂದ್ ಮಾಡಲಾಗಿದೆ. ಮಾರಕ ಸೋಂಕಿಗೆ ಏಳು ಮಂದಿ ಮೃತಪಟ್ಟು, 396ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುವಿಕೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Comments are closed.