ನವದೆಹಲಿ: ಭಾರತದಲ್ಲಿ ತನ್ನ ಮರಣಮೃದಂಗವನ್ನು ಮುಂದುವರೆಸಿರುವ ಕೊರೋನಾ ವೈರಸ್ 18 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಸೋಂಕಿತರ ಸಂಖ್ಯೆ 650ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಗುಜರಾತ್, ತಮಿಳುನಾಡು, ಮಧ್ಯಪ್ರದೇಶದಲ್ಲಿ ವೈರಸ್’ಗೆ ಒಬ್ಬೊಬ್ಬರು ಮೃತಪಟ್ಟಿದ್ದು, ಇದರಂತೆ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ತಮಿಳುನಾಡು ರಾಜ್ಯಕ್ಕೆ ಬಂದಿದ್ದ ಇಂಡೋನೇಷ್ಯಾದ 8 ಮಂದಿ ಪ್ರಜೆಗಳಲ್ಲಿ ವೈರಸ್ ದೃಢಪಟ್ಟಿದೆ ಎದು ವರದಿಗಳಿಂದ ತಿಳಿದುಬಂದಿದೆ. ಇದರಂತೆ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಇಂಡೋನೇಷ್ಯಾದಿಂದ ಬಂದಿರುವ 8 ಮಂದಿಯ ಪೈಕಿ ಏರ್ವ ಮುಸ್ಲಿಂ ಮೌಲ್ವಿಯಾಗಿದ್ದು, ಈದ, ಮಾರ್ಚ್ 11 ರಂದು ಕೇರಳ ಎಕ್ಸ್’ಪ್ರೆಸ್ ನಲ್ಲಿ ಸೇಲಂವರೆಗೂ ಪ್ರಯಾಣ ಬೆಳೆಸಿದ್ದ ಎಂದು ಹೇಳಲಾಗುತ್ತಿದೆ.
Comments are closed.