ಕೋವಿಡ್ 19 ವೈರಸ್ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ‘ಕೊರೊನಾ ಕವಚ್’ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ಇಲಾಖೆ ವತಿಯಿಂದ ಸಿದ್ಧಗೊಂಡಿರುವ ಇದು ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಿಗಾಗಿ ಇದನ್ನು ಸಿದ್ಧಪಡಿಸಲಾಗಿದೆ.
ವಿಶೇಷತೆ
ಎಬಿಪಿ ಲೈವ್ ಡಾಟ್ ಕಾಂ ವೆಬ್‌ಸೈಟ್‌ನ ಪ್ರಕಾರ, ‘ಕೊರೊನಾ ಕವಚ್ ಆ್ಯಪ್’, ಮೊಬೈಲ್‌ನಲ್ಲಿನ ಲೊಕೇಷನ್ ಸೇವೆಯನ್ನಾಧರಿಸಿ ಕೆಲಸ ಮಾಡುತ್ತದೆ. ಆ ಮೂಲಕ, ಮೊಬೈಲ್ ಬಳಕೆದಾರನ ಚಲನವಲನಗಳನ್ನು ಗಮನಿಸಿ, ಆ ವ್ಯಕ್ತಿಯು ಕೋವಿಡ್ 19 ವೈರಸ್ ಸೋಂಕಿತರನ್ನು ಭೇಟಿಯಾಗಿದ್ದರೆ ಆ ಬಗ್ಗೆ ಮಾಹಿತಿ ನೀಡುತ್ತದೆ. ಈ ಆ್ಯಪ್ ಆರಂಭದಲ್ಲಿ ಇದು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯ.
ಹೇಗೆ ಕೆಲಸ ಮಾಡುತ್ತೆ?
ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ಗ್ರಾಹಕನು ತನ್ನ ಫೋನ್ ನಂಬರನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಫೋನ್‌ನ ಜಿಪಿಎಸ್ ತಂತ್ರಜ್ಞಾನದ ಮೂಲಕ ಆ್ಯಪ್ ತನ್ನ ಸೇವೆ ನೀಡುತ್ತದೆ. ಗ್ರಾಹಕನ ವಿವರಗಳನ್ನು ಗೌಪ್ಯವಾಗಿಡುವುದು ಇದರ ಇನ್ನೊಂದು ವಿಶೇಷ
ಎಂದಿನಿಂದ ಲಭ್ಯ?
ಆ್ಯಪ್‌ನ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಸದ್ಯಕ್ಕೆ ಇದರ ಬಿಟಾ ವರ್ಷನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
Comments are closed.