ಚೆನ್ನೈ: ವಿದೇಶದಿಂದ ಭಾರತಕ್ಕೆ ಬಂದು ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯೋರ್ವ ಮನೆಯಲ್ಲಿಯಿದ್ದು ಹುಚ್ಚನಾಗಿ, ರಾತ್ರಿ ಮನೆಯಿಂದ ಬೆತ್ತಲಾಗಿ ಓಡಿ ಹೋಗಿ ವೃದ್ಧೆಯೊಬ್ಬರ ಕತ್ತು ಕಚ್ಚಿ ಕೊಲೆಮಾಡಿದ ಭಯಾನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಥೇನಿ ನಿವಾಸಿ ನಾಟ್ಚಿಯಮ್ಮಾಲ್(90) ಮೃತ ದುರ್ಧೈವಿ. ಕೆಲವು ದಿನಗಳ ಹಿಂದೆ ಶ್ರೀಲಂಕಾದಿಂದ ಭಾರತಕ್ಕೆ ವಾಪಾಸ್ ಬಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಮನೆಯಲ್ಲೇ ಇದ್ದು ಇದ್ದು ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದನು. ಹುಚ್ಚನಂತೆ ವರ್ತಿಸುತ್ತಿದ್ದ ಆತ ಶುಕ್ರವಾರ ಮನೆಯಿಂದ ಬೆತ್ತಲಾಗಿ ಹೊರಗೆ ಓಡಿಹೋಗಿದ್ದನು.
ಬೆತ್ತಲಾಗಿ ಮನೆಯಿಂದ ಹೊರಗೆ ಓಡಿಹೋಗಿದ್ದ ವ್ಯಕ್ತಿ ಮನೆಯ ಹೊರಗೆ ಕಟ್ಟೆ ಮೇಲೆ ಮಲಗಿದ್ದ ವೃದ್ಧೆಯ ಕತ್ತನ್ನು ಜೋರಾಗಿ ಕಚ್ಚಿದ್ದಾನೆ. ವ್ಯಕ್ತಿ ಹಲ್ಲೆ ಮಾಡಿದ ತಕ್ಷಣ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದು, ಅಕ್ಕಪಕ್ಕದ ಮನೆಯವರೆಲ್ಲಾ ಓಡಿಬಂದು ವೃದ್ಧೆಯನ್ನು ರಕ್ಷಿಸಿ, ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು.
ಕತ್ತಿಗೆ ಬಲವಾಗಿ ಪಟ್ಟಾಗಿದ್ದ ಪರಿಣಾಮ ರಕ್ತಸ್ರಾವವಾಗಿ ವೃದ್ಧೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಇತ್ತ ಹಲ್ಲೆ ಮಾಡಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.
Comments are closed.