ರಾಷ್ಟ್ರೀಯ

ಶಿಲ್ಪಾ ಶೆಟ್ಟಿಗೆ ಜೀವನಪಾಠ ಕಲಿಸಿದ ಕೊರೊನಾ ವೈರಸ್: ಮನೆಗೆಲಸ ಮಾಡೋಕೆ ಆಳುಗಳಿಲ್ಲ

Pinterest LinkedIn Tumblr

ಇಡೀ ಭಾರತ ಲಾಕ್‌ಡೌನ್ ಆಗಿದೆ. ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಇದರಿಂದಾಗಿ ಎಷ್ಟೋ ಜನರು ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ಯಾವಾಗಲೂ ಬ್ಯುಸಿಯಿರುವ ಸೆಲೆಬ್ರಿಟಿಗಳು ಈಗ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಬಾಲಿವುಡ್ ನಟಿ, ಮಂಗಳೂರಿನ ಹುಡುಗಿ ಶಿಲ್ಪಾ ಶೆಟ್ಟಿ ಕೂಡ ಮನೆಗೆಲಸ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೆ ಕೊರೊನಾ ವೈರಸ್ ಅವರಿಗೆ ಜೀವನಪಾಠ ಕಲಿಸಿದೆಯಂತೆ.

ಮನೆಗೆಲಸ ಮಾಡೋಕೆ ಆಳುಗಳು

ಅಡುಗೆ ಮಾಡೋಕೆ ಒಬ್ಬರು, ಮನೆ ಸ್ವಚ್ಛಗೊಳಿಸೋಕೆ ಒಬ್ಬರು ಅಂತೆಲ್ಲ ಹಲವರ ಮನೆಯಲ್ಲಿ ಆಳುಗಳಿದ್ದರು. ಈಗ ಪ್ರತಿಯೊಬ್ಬರೂ ಅವರವರ ಮನೆ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು. ಬಾಲಿವುಡ್ ನಟಿ ಕತ್ರಿನಾ ಕೈಫ್ ಪಾತ್ರೆ ತೊಳೆಯೋದು, ಕಸ ಗುಡಿಸೋದನ್ನು ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು.

ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದೇನು?
“ಕೆಲವು ದಿನಗಳಿಂದ ಗಾರ್ಡನ್‌ ಸ್ವಚ್ಛಗೊಳಿಸುತ್ತಿದ್ದೇನೆ. ಗಾರ್ಡನ್ ಕ್ಲೀನ್ ಮಾಡಲು ಸಹಾಯ ಮಾಡುವವರನ್ನು ಈ ಲಾಕ್‌ಡೌನ್ ನೆನಪು ಮಾಡಿಕೊಳ್ಳುವಂತೆ ಮಾಡಿದೆ, ಹಾಗೆಯೇ ಅವರನ್ನು ಅಭಿನಂದಿಸಬೇಕು. ಮನೆಗೆಲಸಕ್ಕೆ ಸಹಾಯ ಮಾಡುವವರಿಂದಾಗಿ ನಮ್ಮ ಬದುಕು ತುಂಬ ಸರಳವಾಗಿದೆ. ದುರದೃಷ್ಟವಶಾತ್ ಇಂತಹ ಸಮಯದಲ್ಲಿ ಮನೆಗೆಲಸದವರನ್ನು ನೆನಪು ಮಾಡಿಕೊಳ್ಳುತ್ತೇವೆ. ನಮ್ಮ ಜೀವನವನ್ನು ಆರಾಮದಾಯಕವಾಗಿಟ್ಟ ಪ್ರತಿಯೊಬ್ಬರಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದರಿಂದಾಗಿಯೇ ನಾವು ನಮ್ಮ ಸಮಯವನ್ನು ಎಂಜಾಯ್ ಮಾಡಬಹುದು, ಹೊರಗಡೆ ಹೋಗಿ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ನಮ್ಮ ಲೈಫ್ ಮೊದಲಿನಂತಾದಾಗ ಅವರಿಗೆಲ್ಲ ಗೌರವ ಕೊಡೋದನ್ನು ಮಾತ್ರ ಮರೆಯಬೇಡಿ” ಎಂದು ಶಿಲ್ಪಾ ಶೆಟ್ಟಿ, ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸೌಂದರ್ಯ, ಯೋಗ, ಅಡುಗೆ ಮುಂತಾದ ವಿಚಾರಗಳ ಬಗ್ಗೆ ವಿಡಿಯೋ ಮಾಡುವ ಶಿಲ್ಪಾ ಶೆಟ್ಟಿ
ಸೆಲೆಬ್ರಿಟಿಗಳ ಮನೆಯಲ್ಲಿ ಕೆಲಸ ಮಾಡೋದಿಕ್ಕೆ ಬಹಳಷ್ಟು ಜನರು ಇರುತ್ತಾರೆ. ಹೀಗಾಗಿ ಎಷ್ಟೋ ಸೆಲೆಬ್ರಿಟಿಗಳಿಗೆ ಮನೆಗೆಲಸ ಬರೋದಿಲ್ಲ. ಅಡುಗೆ ಮನೆಗೆ ಹೋಗದ ಎಷ್ಟೋ ನಟಿಮಣಿಯರು ನಮ್ಮ ಮುಂದಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಯೋಗ ಮಾಡೋದರಲ್ಲಿ ತುಂಬ ಫೇಮಸ್. ಸೌಂದರ್ಯ, ಯೋಗ, ಅಡುಗೆ ಮುಂತಾದ ವಿಚಾರಗಳ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ.

Comments are closed.