ನವದೆಹಲಿ(ಮಾ.27): ಪೆಂಡಂಭೂತದಂತೆ ಕಾಡುತ್ತಿರುವ ಕೊರೋನಾ ವೈರಸ್ಗೆ ಇಟಲಿ ಜರ್ಜರಿತವಾಗಿದೆ. ಕೊರೋನಾ ವೈರಸ್ ಮಿತೀ ಮೀರಿ ಹರಡುತ್ತಿದ್ದು, ಸಾವಿನ ಸಂಖ್ಯೆ 10 ಸಾವಿರದ ಗಡಿ ದಾಟಿದೆ.
ಇಟಲಿಯಲ್ಲಿ ಈವರೆಗೆ 92 ಸಾವಿರ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಸ್ಪೇನ್ನಲ್ಲಿ ಕೂಡ ಕೊರೋನಾ ಹಾವಳಿ ಮಿತಿ ಮೀರುತ್ತಿದೆ. ಈವರೆಗೆ ಸ್ಪೇನ್ನಲ್ಲಿ 5,982 ಜನರು ಅಸುನೀಗಿದ್ದಾರೆ. ಇದು ವಿಶ್ವದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅಮೆರಿಕ ಕೂಡ ಭೀಕರ ವೈರಸ್ಗೆ ನಲುಗಿದೆ. ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕೊರೋನಾ ವೈರಸ್ ತಡೆಯಲು ಮಾತ್ರ ಅಮೆರಿಕದ ಬಳಿ ಸಾಧ್ಯವಾಗುತ್ತಿಲ್ಲ. ಪರಿಣಾಮ ಗುರುವಾರ ಒಂದೇ ದಿನ ಅಮೆರಿಕದಲ್ಲಿ 7 ಸಾವಿರ ಪ್ರಕರಣ ದಾಖಲಾಗಿದೆ.ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1.23ಕ್ಕೆ ಏರಿಕೆ ಆಗಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 228 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2 ಸಾವಿರಕ್ಕೆ ಏರಿಕೆ ಆಗಿದೆ.
ಇನ್ನು ವಿಶ್ವಾದ್ಯಂತ ಕೊರೋನಾ ವೈರಸ್ ಹರಡಿರುವ ರೀತಿ ತೀವ್ರ ಆತಂಕ ಸೃಷ್ಟಿಸುತ್ತದೆ. ಈವರೆಗೆ ವಿಶ್ವದಲ್ಲಿ 6,63,720 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 30 ಸಾವಿರ ಜನರು ಕೊರೋನಾಗೆ ಬಲಿಯಾಗಿದ್ದಾರೆ. 1.42 ಲಕ್ಷ ಜನರು ಕೊರೋನಾ ವೈರಸ್ನಿಂದ ಚೇತರಿಕೆ ಕಂಡಿದ್ದಾರೆ.
Comments are closed.