ನವದೆಹಲಿ: ಮಾರಣಾಂತಿಕ ಕೋವಿಡ್ 19ಗೆ ಸಂಬಂಧಿಸಿದಂತೆ ಹೊಸ ಅಧ್ಯಯನ ವರದಿಗಳು ಬರುತ್ತಲೇ ಇದೆ. ಇದೀಗ ನೂತನ ಅಧ್ಯಯನವೊಂದರ ಪ್ರಕಾರ ಕೋವಿಡ್ 19 ವೈರಸ್ ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ ಹಲವು ಗಂಟೆಗಳ ಕಾಲ ವಾತಾವರಣದಲ್ಲಿ ಬದುಕಿರುತ್ತದೆ ಎಂದು ತಿಳಿಸಿದೆ.
ಅಮೆರಿಕದ ವಿಜ್ಞಾನಿಗಳು ನಡೆಸಿರುವ ಸಂಶೋಧನೆ ಪ್ರಕಾರ, ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಕೋಣೆಯನ್ನು ಬಿಟ್ಟು ಹೊರಹೋದ ಮೇಲೆ ಮಾರಣಾಂತಿಕ ಸೋಂಕು ಎಷ್ಟು ಹೊತ್ತು ನಿಧಾನವಾಗಿ ಹರಡಬಲ್ಲದು ಎಂಬ ಅಂಶವನ್ನು ಪತ್ತೆಹಚ್ಚಿರುವುದಾಗಿ ಹೇಳಿದೆ.
ನೆಬ್ರಾಸ್ಕಾ ಯೂನಿರ್ವಸಿಟಿ ಸಂಶೋಧಕರ ಪ್ರಕಾರ, ಕೋವಿಡ್ 19 ಪಾಸಿಟಿವ್ ರೋಗಿಗಳಿರುವ ಆಸ್ಪತ್ರೆಯ ಕೋಣೆಯ ಹೊರಭಾಗ ಹಾಗೂ ಕಾರಿಡಾರ್ ಗಳಲ್ಲಿ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ.
ಸಂಶೋಧಕರ ಪ್ರಕಾರ, ಮಾರಣಾಂತಿಕ ಕೋವಿಡ್ 19 ಸೋಂಕು ಪೀಡಿತರ ಆರೈಕೆ ಮಾಡುವ ಸಿಬ್ಬಂದಿಗಳು, ವೈದ್ಯರು ಸುರಕ್ಷತೆಯ ಬಟ್ಟೆ ಧರಿಸುವುದು ತುಂಬಾ ಮುಖ್ಯ ಎಂದು ವಿವರಿಸಿದ್ದಾರೆ. ಅಲ್ಲದೇ ಈ ಅಧ್ಯಯನದ ಬಗ್ಗೆ ಇನ್ನಷ್ಟೇ ಹಿರಿಯ ವಿಜ್ಞಾನಿಗಳು ಪುನರ್ ವಿಮರ್ಶೆ ನಡೆಸಬೇಕಾಗಿದೆ ಎಂದು ವರದಿ ಹೇಳಿದೆ.
ಕೋವಿಡ್ 19 ಸೋಂಕು ಪೀಡಿತ 11 ರೋಗಿಗಳ ಕೋಣೆಯಲ್ಲಿ ಅಧ್ಯಯನ ನಡೆಸಲಾಗಿತ್ತು. ಈ ಕೋಣೆಯಲ್ಲಿ ಕೋವಿಡ್ ರೋಗಿಗಳನ್ನು ಐಸೋಲೇಶನ್ ನಲ್ಲಿ ಇಡಲಾಗಿತ್ತು. ಹೀಗಾಗಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಯಾವುದೇ ವ್ಯಕ್ತಿ ಕೋಣೆ ಪ್ರವೇಶಿಸಿದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಡೈಲಿ ಮೇಲ್ ವಿವರಿಸಿದೆ.
ನೆಬ್ರಾಸ್ಕಾ ಯೂನಿರ್ವಸಿಟಿಯ ಸಾಂಕ್ರಾಮಿಕ ರೋಗ ತಜ್ಞ, ಲೇಖಕ ಜೇಮ್ಸ್ ಲಾಲೇರ್ ಪ್ರಕಟಣೆಯಲ್ಲಿ, ಈಗಾಗಲೇ ಸೋಂಕು ಪೀಡಿತ ರ ಪ್ರಾಥಮಿಕ ಚಿಕಿತ್ಸೆ ಹಂತದಲ್ಲಿ ನಮ್ಮ ವೈದ್ಯರ ತಂಡ ಗಾಳಿಯಲ್ಲಿ ರೋಗಾಣು ದೇಹ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
Comments are closed.