ರಾಷ್ಟ್ರೀಯ

ಲಾಕ್ ಡೌನ್: ಮೃತಪಟ್ಟಂತೆ ನಟಿಸಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿದ!

Pinterest LinkedIn Tumblr


ಜಮ್ಮು-ಕಾಶ‍್ಮೀರ: ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವ್ಯಕ್ತಿಯೊಬ್ಬ ಮನೆಗೆ ತೆರಳಲು ಸಾಧ್ಯವಾಗದೇ, ಬಳಿಕ ಸತ್ತಂತೆ ನಟಿಸಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿದ ವಿಚಿತ್ರ ಘಟನೆ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.

ಹಕ್ರಮ್ ದಿನ್ ಎಂಬ ಕಳೆದ ವಾರ ಗಾಯಗೊಂಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ. ಮಂಗಳವಾರ ಡಿಸ್ ಚಾರ್ಜ್ ಕೂಡ ಆಗಿದ್ದನು. ಆದರೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ.

ಇದಕ್ಕಾಗಿ ತನ್ನ ಇತರ ಮೂವರು ಸ್ನೇಹಿತರ ಸಹಾಯದಿಂದ ಸುಳ್ಳು ಮರಣ ಧೃಢಿಕರಣ ಪತ್ರ ಮಾಡಿಸಿ. ಖಾಸಗಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ವಿಚಾರಣೆಗೊಳಪಡಿಸಿ ನಾಲ್ವರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಿದ್ದಾರೆ.

Comments are closed.