ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಕಾರಣ ದೇಶದಲ್ಲಿ ಉಲ್ಭಣಿಸಿರುವ ಪರಿಸ್ಥಿತಿಯ ಹಿನ್ನೆಲೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಚಿವರು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ನಿರ್ದೇಶನಗಳನ್ನು ಜಾರಿಗೊಳಿಸಿದ್ದು, ಒಂದನೇ ತರಗತಿಯಿಂದ ಎಂಟನೆ ತರಗಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಮುಂದಿನ ತರಗತಿಗೆ ಬಡ್ತಿ ನೀಡಲು ಸೂಚಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವ ರಮೇಶ್ ಪೋಖರಿಯಾಲ್ ‘ನಿಶಂಕ್’, “ಕೊರೊನಾ ವೈರಸ್ ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ನಾನು CBSEಗೆ ಒಂದನೇ ತರಗತಿಯಿಂದ ಎಂಟನೆ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಂದಿನ ತರಗತಿಗೆ ಬಡ್ತಿ ನೀಡಲು ಸಲಹೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, “ಒಂಬತ್ತನೇ ತರಗತಿ ಹಾಗೂ 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಇದುವರೆಗೆ ಅವರು ಕೈಗೊಂಡ ಪ್ರಾಜೆಕ್ಟ್, ಕಾಲ-ಕಾಲಕ್ಕೆ ತೆಗೆದುಕೊಂಡ ಪರೀಕ್ಷೆ ಇತ್ಯಾದಿಗಳ ಮೌಲ್ಯಮಾಪನವನ್ನು ಆಧಾರವಾಗಿಟ್ಟುಕೊಂಡು ಮುಂದಿನ ತರಗತಿ/ದರ್ಜೆಗೆ ಬಡ್ತಿ ನೀಡಲಾಗುವುದು. ಇನ್ನೊಂದೆಡೆ ಈ ಬಾರಿ ಬಡ್ತಿ ಪಡೆಯದ ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ ನಡೆಸಲಾಗುವ ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆಗಳಿಗೆ ಹಾಜರಾಗಬಹುದು” ಎಂದು ಹೇಳಿದ್ದಾರೆ. ಇದರ ಜೊತೆಗೆ ವಿದೇಶದಲ್ಲಿ ಪರೀಕ್ಷೆಗಳನ್ನು ನಡೆಸುವುದರ ಕುರಿತು ಹೇಳಿಕೆ ನೀಡಿರುವ CBSE ಮಂಡಳಿ, ಮೌಲ್ಯಮಾಪನಕ್ಕಾಗಿ ಉತ್ತರ ಪತ್ರಿಕೆಗಳನ್ನು ಭಾರತಕ್ಕೆ ತರುವಲ್ಲಿ ಅಡಚಣೆ ಎದುರಾಗುತ್ತಿದೆ ಎಂದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ 386 ಪ್ರಕರಣಗಳು ಬೆಳಕಿಗೆ ಬಂದಿವೆ
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕೊರೊನಾ ವೈರಸ್ ನ ಒಟ್ಟು 386 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸಿದೆ. ಇಂದು ಒಟ್ಟು ಮೂವರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿರುವ ಆರೋಗ್ಯ ಇಲಾಖೆ, ಈ ವೃದ್ಧಿ ರಾಷ್ಟ್ರೀಯ ಮಟ್ಟದಲ್ಲಿ ಸೋಂಕು ಹರಡುವ ಸ್ಥಿತಿಯನ್ನು ಎತ್ತಿ ತೋರಿಸುವುದಿಲ್ಲ ಎಂದು ಹೇಳಿದ್ದು, ಈ ಘಟನೆಯಲ್ಲಿ ನಿಜಾಮುದ್ದೀನ್ ಮರ್ಕಜ್ ನ ಘಟನೆ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮಾರ್ಚ್ 1 ರಿಂದ ಮಾರ್ಚ್ 15ರವರೆಗೆ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೊರೊನಾ ಸೋಂಕು ಪಸರಿಸಿರುವ ಹಲವು ಪ್ರಕರಣಗಳು ಸೋಮವಾರ ಮತ್ತು ಮಂಗಳವಾರ ಬೆಳಕಿಗೆ ಬಂದಿವೆ.
ಈ ಕುರಿತು ನಿರಂತರ ಸುದ್ದಿಗೋಷ್ಠಿ ನಡೆಸುತ್ತಿರುವ ಕೇಂದ್ರ ಆರೋಗ್ಯ ಇಲಾಖೆಯ ಸಂಯುಕ್ತ ಸಚಿವ ಲವ್ ಅಗರವಾಲ್, ದೇಶಾದ್ಯಂತ ಕೊರೊನಾ ವೈರಸ್ ನ ಒಟ್ಟು 1637 ಪತ್ತೆಯಾಗಿದ್ದು, ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇವಲ ದೆಹಲಿ ಒಂದರಲ್ಲೇ ಕಳೆದ 24 ಗಂಟೆಗಳಲ್ಲಿ ಒಟ್ಟು 18 ಪ್ರಕರಣಗಳು ಕೊರೊನಾ ಸೋಂಕಿಗೆ ಗುರಿಯಾಗಿರುವುದು ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ 65 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊರೊನಾ ವೈರಸ್ ನಿಂದ ಪಾರಾಗಲು ಕೇವಲ ಲಾಕ್ ಡೌನ್ ಒಂದೇ ಪ್ರಭಾವಿ ಅಸ್ತ್ರವಾಗಿದ್ದು, ಎಲ್ಲರೂ ಲಾಕ್ ಡೌನ್ ಅನ್ನು ಸುನಿಶ್ಚಿತಗೊಳಿಸಬೇಕು ಎಂದು ಹೇಳಿದ್ದಾರೆ.
Comments are closed.