ರಾಷ್ಟ್ರೀಯ

ಕೋವಿಡ್ ವಿರುದ್ಧ ಹೋರಾಟದ ಮುಂಚೂಣಿ ಪಡೆ ಬದಲು ದೊಡ್ಡ ಪಡೆ ನಿಯೋಜನೆಗೆ ಕೇಂದ್ರ ನಿರ್ಧಾರ

Pinterest LinkedIn Tumblr


ನವದೆಹಲಿ: ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಡೆಯ ಬದಲಿಗೆ ಬೇರೊಂದು ದೊಡ್ಡ ಪಡೆಯನ್ನು ನಿಯೋಜಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅವರಿಗೆ ಆನ್‌ಲೈನ್‌ ಮೂಲಕ ತರಬೇತಿಗಾಗಿ, ಇಂಟಿಗ್ರೇಟೆಡ್‌ ಗವರ್ನಮೆಂಟ್‌ ಆನ್‌ಲೈನ್‌ ಟ್ರೈನಿಂಗ್‌ (ಐಜಿಒಟಿ) ಎಂಬ ವ್ಯವಸ್ಥೆಯಡಿ, ಸಿದ್ಧ ತರಬೇತಿ ಪಠ್ಯವನ್ನು ಈಗಾಗಲೇ ಬಳಕೆಗೆ ತರಲಾಗಿದೆ.

ವೈದ್ಯರು, ಶುಶ್ರೂಷಕರು, ಪ್ಯಾರಾಮೆಡಿಕಲ್‌ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ, ತಂತ್ರಜ್ಞರು, ಮಿಡ್‌ವೈಫ್ ಗಳು (ಎಎನ್‌ಎಂ), ವಿವಿಧ ರಾಜ್ಯಗಳ ಸರ್ಕಾರಿ ಅಧಿಕಾರಿಗಳು ಹಾಗೂ ನಾಗರಿಕ ಸಂರಕ್ಷಣಾಧಿಕಾರಿಗಳು ಈ ತರಬೇತಿಯನ್ನು ಪಡೆಯಬಹುದು ಎಂದು ಸಿಬ್ಬಂದಿ, ತರಬೇತಿ ನಿರ್ದೇಶನಾಲಯ ಹೇಳಿದೆ.

ರಾಷ್ಟ್ರೀಯ ಕಾರ್ಯಪಡೆ: ಸೋಂಕಿನ ವಿರುದ್ಧದ ಹೋರಾಟಕ್ಕೆ ಪೂರಕವಾದ ಸಂಶೋಧನೆ ನಡೆಸಲು ರಾಷ್ಟ್ರೀಯ ಕಾರ್ಯಪಡೆ ರಚಿಸಿದ್ದು, ಸದಸ್ಯರನ್ನೂ ನೇಮಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.

ಸಂಶೋಧನಾ ಆದ್ಯತೆಗಳನ್ನು ಗುರುತಿಸಲು, ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವ ಉದ್ದೇಶದಿಂದ ಸ್ಥಾಪಿಸಿರುವ ರಾಷ್ಟ್ರೀಯ ಕಾರ್ಯಪಡೆಯನ್ನು (ನ್ಯಾಷನಲ್‌ ಟಾಸ್ಕ್ ಫೋರ್ಸ್‌) ಐದು ತಂಡಗಳನ್ನಾಗಿ ವಿಂಗಡಿಸಲಾಗಿದೆ.

Comments are closed.