ಉತ್ತರ ಪ್ರದೇಶ: ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದು, ಉತ್ಕರ ಪ್ರದೇಶದ ಹಪೂರ್ ಜಿಲ್ಲೆಯಲ್ಲಿ ವಕೀಲರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ತಾತ್ಕಾಲಿಕವಾಗಿ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.
ಅಸೌರಾ ಗ್ರಾಮದ ವಕೀಲ ಮುಕುಲ್ ತ್ಯಾಗಿ ಈ ರೀತಿಯಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಕೊರೋನಾವೈರಸ್ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಡಾಕ್ಟರ್ ಹೇಳುತ್ತಿರುತ್ತಾರೆ. ಅದರಿಂದಾಗಿ ಏಕಾಂತದಲ್ಲಿ ಬದುಕಲು ಮರವನ್ನೇ ತಾತ್ಕಾಲಿಕವಾಗಿ ಮನೆಯನ್ನಾಗಿ ಮಾಡಿಕೊಂಡು ಎಂಜಾಯ್ ಮಾಡುತ್ತಿರುವುದಾಗಿ ಮುಕುಲ್ ತ್ಯಾಗಿ ತಿಳಿಸಿದ್ದಾರೆ.
Comments are closed.