ರಾಷ್ಟ್ರೀಯ

ಕೊರೊನಾದಿಂದ ಸಾವನ್ನಪ್ಪಿದ ಭಾರತದ ಮೊದಲ ವೈದ್ಯ.. ವಿಡಿಯೋ ಕರೆ ಮಾಡಿ ವಿದಾಯ ಹೇಳಿದ ಪುತ್ರರು

Pinterest LinkedIn Tumblr


ಮಧ್ಯಪ್ರದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ, ಇಂದೋರ್ ನಗರದಲ್ಲಿ ವೈದ್ಯರೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರೂಪ್ರಾಮ್ ನಗರ ನಿವಾಸಿ ಶತ್ರುಘನ್ ಪಂಜವಾಣಿ (62) ಚಿಕಿತ್ಸೆಯ ಸಮಯದಲ್ಲಿ ನಿಧನರಾದ ವೈದ್ಯರು. ವೈದ್ಯಕೀಯ ವರದಿ ಪಾಸಿಟಿವ್ ಬಂದ ನಂತರ ಏಪ್ರಿಲ್ 8 ರಂದು ಡಾ.ಪಂಜವಾಣಿಯನ್ನು ಸಿಎಚ್ಎಲ್ನಿಂದ ಸೀಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ವೈದ್ಯರ ಸಾವಿನ ಸುದ್ದಿ ಕೇಳಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ಡಾ. ಶತ್ರುಘನ್ ಪಂಜವಾಣಿ ಮೊದಲಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಾಲ್ಕು ದಿನಗಳ ಕಾಲ ಸಿಎಚ್ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆ ನಂತರ ಏಪ್ರಿಲ್ 8 ರಂದು, ಪಾಸಿಟಿವ್ ವರದಿ ಬಂದ ನಂತರ, ಅವರನ್ನು ಸಿಮ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೂ ಅವರ ಸ್ಥಿತಿ ಸುಧಾರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಗುರುವಾರ ಮುಂಜಾನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಡಾ. ಪಂಜವಾಣಿ ಅವರ ಮೂವರು ಪುತ್ರರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾರೆ. ಲಾಕ್ ಡೌನ್ ಆದ ಕಾರಣ, ಅವರು ದೇಶಕ್ಕೆ ಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ತಂದೆಗೆ ವಿದಾಯ ಹೇಳಲು ವಿಡಿಯೋ ಕರೆ ಮಾಡಿದರು. ನಂತರ ವೈದ್ಯರ ತಂಡವು ಮುಕ್ತಿಧಾಮದಲ್ಲಿ ಅಂತಿಮ ವಿದಾಯ ಹೇಳಿತು. ಡಾ. ಪಂಜವಾಣಿ ಅವರು ಅತ್ಯತ್ತಮ ವೈದ್ಯರಲ್ಲಿ ಒಬ್ಬರು ಎಂದು ಹೆಸರು ಪಡೆದಿದ್ದು, ಬಹುಶಃ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಮೊದಲ ವೈದ್ಯರ ಪ್ರಕರಣ ಇದಾಗಿದೆ. ವಾಸ್ತವವಾಗಿ ಚೀನಾದಿಂದ ಪ್ರಾರಂಭವಾದ ಈ ಸಾಂಕ್ರಾಮಿಕ ರೋಗವು ಈಗ ಜಪಾನ್ ಮತ್ತು ಭಾರತದಲ್ಲಿ ಭಾರಿ ರೂಪಾಂತರ ಪಡೆಯುತ್ತಿದೆ. ಗುರುವಾರದ ವೇಳೆಗೆ, 24 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚುಅಂದರೆ 500 ಹೊಸ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂಬ ಅಂಶದಿಂದ ಪರಿಸ್ಥಿತಿಯ ತೀವ್ರತೆಯನ್ನು ನೀವು ಅಳೆಯಬಹುದು.

ಜಪಾನ್ನಲ್ಲಿ ಈವರೆಗೆ 4,667 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, 94 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸಮಯದಲ್ಲಿ, ಭಾರತದಲ್ಲಿ 5,734 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು,166 ಜನರು ಸಾವನ್ನಪ್ಪಿದ್ದಾರೆ. ಇದೆನ್ನೆಲ್ಲಾ ನೋಡಿದರೆ ಯುರೋಪಿನಲ್ಲಿ ವಕ್ಕರಿಸಿ ಮೆರೆದ ನಂತರ ಕೊರೊನಾ, ಇದೀಗ ಇಲ್ಲಿ ಅಟ್ಟಹಾಸ ಮೆರೆಯುತ್ತಿರುವ ಹಾಗೆ ಕಾಣುತ್ತಿದೆ.

Comments are closed.